ದೇಶದಲ್ಲಿ ಈಗ ಭ್ರಷ್ಠಾಚಾರ ನಡೆಸುವುದಕ್ಕಿಂತ ಉದ್ಯಮ ನಡೆಸುವುದು ಸುಲಭವಾಗಿದೆ: ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. "ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ನಡುವಿನ ವ್ಯತ್ಯಾಸ..........

Published On :
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. "ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ನಡುವಿನ ವ್ಯತ್ಯಾಸ - ಆಗ ಭ್ರಷ್ಠಾಚಾರ ಮಾಡು೮ವುದು ಸುಲಭವಾಗಿತ್ತು. ಈಗ ಭ್ರಷ್ಠಾಚಾರದ ಬದಲು ಉದ್ಯಮ ನಡೆಸುವುದು ಸುಲಭವಾಗಿದೆ"
ಜಿಎಸ್ ಟಿ ಮತ್ತು ನೋಟು ನಿಷೇಧದ ಕಾರಣ ಭಾರತದಲ್ಲಿ ಉದ್ಯಮ ನಡೆಸುವುದು ಕಠಿಣವಾಗುತ್ತಿದೆ ಎಂಬ ರಾಹುಲ್ ಟ್ವೀಟ್ ಗೆ ಪ್ರತಿಕ್ರಯಿಸಿದ ಜೇಟ್ಲಿ "ಯುಪಿಎ ಮತ್ತು ಎನ್‌ಡಿ ಎ ನಡುವಿನ ವ್ಯತ್ಯಾಸ ಗಮನಿಸಿ- ಭ್ರಷ್ಟಾಚಾರ ನಡೆಸುವುದು ಸುಲಭ ವಾಗಿದ್ದ ಪರಿಸ್ಥಿತಿ ಬದಲಾಗಿ ಉದ್ಯಮ ನಡೆಸುವುದು ಸುಲಭ ಎನ್ನುವ ಪರಿಸ್ಥಿತಿ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಹುಲ್ ಗಾಂಧಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರನ್ನು ಭೇಟಿಯಾಗಬೇಕು ಅವರು ವ್ಯವಹಾರ ನಡೆಸುವುದು ಎಷ್ಟು ಸುಲಭವಾಗಿದೆ ಎನ್ನುವುದನ್ನು ಅರಿಯಬೇಕು ಎಂದಿದ್ದಾರೆ.
ವಿಶ್ವ ಬ್ಯಾಂಕಿನ ವರದಿ ಪ್ರಕಾರ, ದೇಶವು ಪ್ರಸಕ್ತ ಈ ವರ್ಷ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಗೆ 130 ರಿಂದ 100ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BusinessRahul Gandhiರಾಹುಲ್ ಗಾಂಧಿNDAcorruptionಭ್ರಷ್ಟಾಚಾರUPAಯುಪಿಎಎನ್ ಡಿಎFinance Minister Arun Jaitleyಉದ್ಯಮಹಣಕಾಸು ಸಚಿವ ಅರುಣ್ ಜೇಟ್ಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


