ಇರಾನ್ ನ ಚಬಹರ್ ಬಂದರಿನಿಂದ ಅಫ್ಘಾನಿಸ್ತಾನ ಕ್ಕೆ ಗೋಧಿ ಪೂರೈಕೆಗೆ ಚಾಲನೆ ನೀಡಿದ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಚ್.ಇ. ಸಲಾಹದ್ದೀನ್ ರಬ್ಬಾನಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿದೇಶಾಂಗ ಸಚಿವ ......

Published On :
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಎಚ್.ಇ. ಸಲಾಹದ್ದೀನ್ ರಬ್ಬಾನಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿದೇಶಾಂಗ ಸಚಿವ ಎಚ್.ಇ.ಜಾವಾದ್ ಝರೀಫ್, ಇಂದು ಜಂಟಿ ವೀಡಿಯೋ ಕಾನ್ಫರೆನ್ಸ್ ಮೂಲಕ, ಭಾರತದಿಂದ ಅಫ್ಘಾನಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಇರಾನ್ ನ ಚಬಹಾರ್ ಬಂದರಿನ ಮೂಲಕ ಗೋಧಿ ಸಾಗಾಣಿಕೆಗೆ ಚಾಲನೆ ನೀಡಿದರು.
ಈ ಗೋಧಿ ಸಾಗಣೆಯು ಅಫ್ಘಾನಿಸ್ತಾನದ ಜನರಿಗಾಗಿ 1.1 ಮಿಲಿಯನ್ ಟನ್ ಗಳಷ್ಟು ಗೋಧಿ ಪೂರೈಸಲು ಭಾರತೀಯ ಸರ್ಕಾರವು ಮಾಡಿಕೊಂಡಿದ್ದ ಒಪ್ಪಂದದ ಒಂದು ಭಾಗವಾಗಿದೆ
2016 ರ ಮೇ ತಿಂಗಳಲ್ಲಿ ಇರಾನ್ ಗೆ ಭೇಟಿ ನೀಡಿದ್ದ ಭಾರತ ಪ್ರಧಾನ ಮಂತ್ರಿ ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾಗಾಟ ಕಾರಿಡಾರ್ ಸ್ಥಾಪನೆಯ ಮೇಲೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಚಬಹರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಸರಕು ಸಾಗಾಟ ನಡೆಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ ಆರು ಬಾರಿ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಲಾಗುವುದು. ಅಫ್ಘಾನಿಸ್ತಾನದ ಜನರ ಸಹಾಯಕ್ಕಾಗಿ ಮತ್ತು ಆ ದೇಶದ ಸಮೃದ್ಧಿಗಾಗಿ ತಮ್ಮ ಸರ್ಕಾರ ಬದ್ದವಾಗಿದೆ ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaSushma Swarajಸುಷ್ಮಾ ಸ್ವರಾಜ್Chabahar portForeign Minister of Afghanistan H.E. Salahuddin RabbaniForeign Minister of the Islamic Republic of Iran H.E. Javad Zarifಅಫ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


