ದೇಶ

ಪಣಜಿ: ಎಟಿಎಂ ರಕ್ಷಣಾ ಸಿಬ್ಬಂದಿ ಸಾಹಸ, ಎಟಿಎಂ ದರೋಡೆ ಯತ್ನ ವಿಫಲ

ಎಎಟಿಎಂಗೆ ನುಗ್ಗಿದ ಕಳ್ಳನೊಬ್ಬ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸುತ್ತಿಗೆಯಿಂದ ಹೊಡೆದು ಹಣ ದೋಚಲು ವಿಫಲ ಯತ್ನ ನಡೆಸಿದ ಘಟನೆ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದಿದೆ.

ಪಣಜಿ: ಎಟಿಎಂ ರಕ್ಷಣಾ ಸಿಬ್ಬಂದಿ ಸಾಹಸ, ಎಟಿಎಂ ದರೋಡೆ ಯತ್ನ ವಿಫಲ
ಪಣಜಿ: ಎಟಿಎಂ ರಕ್ಷಣಾ ಸಿಬ್ಬಂದಿ ಸಾಹಸ, ಎಟಿಎಂ ದರೋಡೆ ಯತ್ನ ವಿಫಲ
Published On :
ಪಣಜಿ: ಎಎಟಿಎಂಗೆ ನುಗ್ಗಿದ ಕಳ್ಳನೊಬ್ಬ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸುತ್ತಿಗೆಯಿಂದ  ಹೊಡೆದು ಹಣ ದೋಚಲು ವಿಫಲ ಯತ್ನ ನಡೆಸಿದ ಘಟನೆ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದಿದೆ. ಗೋವಾದ ಪಣಜಿಯಲ್ಲಿ ಬ್ಯಾಂಕ್​ ಆಫ್ ಮಹಾರಾಷ್ಟ್ರದ ಎಟಿಎಂ ದೋಚಲು ಬಂದಿದ್ದ ಆ ಕಳ್ಳ ಬರಿಗೈಯಲ್ಲಿ ವಾಪಸ್​ ಆಗಿದ್ದಾನೆ.
ಬೆಳೆಗ್ಗೆ ಎಟಿಎಂ ಗೆ ಬಂದಿದ್ದ ಕಳ್ಳ ಕೈನಲ್ಲಿನ ಸುತ್ತಿಗೆಯಿಂದ ಭದ್ರತಾ ಸಿಬ್ಬಂದಿ ತಲೆಗೆ ಹಲವಾರು ಬಾರಿ ಹೊಡೆದಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಮಾತ್ರ ಅಷ್ಟಕ್ಕೂ ಜಗ್ಗದೆ ಎಟಿಎಂ ದೋಚದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾನೆ.
ಎಟಿಎಂ ಸಿಬ್ಬಂದಿಯ ಸಾಹಸ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದರಿಂದ ಕಳ್ಳನ ಗುರುತು ಪತ್ತೆಯಾಗಿಲ್ಲ. ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಪ್ರಯತ್ನಿಸಿದ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಂಡ ಕಳ್ಳ ಪರಾರಿಯಾಗಿದ್ದಾನೆ. ಗಾಯಾಳು ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.