ದೇಶ

ಕುಗ್ಗುತ್ತಿದೆ ಮೋದಿ ಹವಾ; ದೇಶವನ್ನು ಮುನ್ನಡೆಸುವ ಶಕ್ತಿ ರಾಹುಲ್ ಗಾಂಧಿಗೆ ಇದೆ: ಶಿವಸೇನೆ ಸಂಸದ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮತ್ತು ನೋಟು ನಿಷೇಧದ ಬಳಿಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಕಡಿಮೆಯಾಗುತ್ತಿದ್ದು ದೇಶವನ್ನು...

ಕುಗ್ಗುತ್ತಿದೆ ಮೋದಿ ಹವಾ; ದೇಶವನ್ನು ಮುನ್ನಡೆಸುವ ಶಕ್ತಿ ರಾಹುಲ್ ಗಾಂಧಿಗೆ ಇದೆ: ಶಿವಸೇನೆ ಸಂಸದ
ಸಂಜಯ್ ರಾವುತ್
Published On :
ಮುಂಬೈ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮತ್ತು ನೋಟು ನಿಷೇಧದ ಬಳಿಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಕಡಿಮೆಯಾಗುತ್ತಿದ್ದು ದೇಶವನ್ನು ಮುನ್ನಡೆಸುವ ತಾಕತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. 
ಜಿಎಸ್‍ಟಿ ಜಾರಿಯಿಂದಾಗಿ ಗುಜರಾತ್ ಜನರು ಸಿಟ್ಟಾಗಿದ್ದು ಡಿಸೆಂಬರ್ ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಸವಾಲು ಎದುರಾಗಲಿದೆ ಎಂದು ಸಂಜಯ್ ರಾವುತ್ ಟಿವಿ ಚಾನಲ್ ನ ಚರ್ಚೆಯೊಂದರಲ್ಲಿ ಹೇಳಿದ್ದಾರೆ. 
ದೇಶವನ್ನು ಮುನ್ನಡೆಸುವ ಶಕ್ತಿ ರಾಹುಲ್ ಗಾಂಧಿಗಿದೆ. ಹೀಗಾಗಿ ಅವರನ್ನು ಪಪ್ಪು ಎಂದು ಕರೆಯುವುದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರನ್ನು ಗೇಲಿ ಮಾಡಲು ಉಪನಾಮವನ್ನು ಉಲ್ಲೇಖಿಸುತ್ತಿರುವುದು ಸರಿಯಲ್ಲ ಎಂದರು. ಇನ್ನು ಇದೇ ವೇಳೆ ರಾಜ್ಯ ಶಿಕ್ಷಣ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ವಿನೋದ್ ತಾವ್ಡೆ ಸಹ ಉಪಸ್ಥಿತರಿದ್ದರು. 
ಈ ದೇಶದಲ್ಲಿನ ಅತಿದೊಡ್ಡ ರಾಜಕೀಯ ಶಕ್ತಿ ಎಂದರೇ ಜನರು...ಮತದಾರರು. ಅಂತಹ ಜನರು ಯಾರನ್ನು ಬೇಕಾದರೂ ಪಪ್ಪು ಮಾಡಬಹುದು ಎಂದು ರಾವುತ್ ಹೇಳಿದ್ದಾರೆ. 
ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿರಿಯ ಮಿತ್ರ ಪಕ್ಷವಾಗಿರುವ ಶಿವಸೇನೆ ನಡುವೆ ಶೀತಲ ಸಮರ ಶುರುವಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ನಿರ್ಣಯಗಳನ್ನು ಟೀಕಿಸುತ್ತಾ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.