ಛತ್ತೀಸ್ ಗಢ: ರಾಜ್ನಂದಗಾವ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ, ಮೂವರು ನಕ್ಸಲರ ಹತ್ಯೆ
ನಗದು ಸಾಗಿಸುತ್ತಿದ್ದ ಮೂವರು ನಕ್ಸಲರನ್ನು ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಕೊಂದ ಘಟನೆ ಛತ್ತೀಸ್ ಗಢದ ಬಂಡುಕೋರ ...

Published On :
ರಾಯ್ಪುರ: ನಗದು ಸಾಗಿಸುತ್ತಿದ್ದ ಮೂವರು ನಕ್ಸಲರನ್ನು ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಕೊಂದ ಘಟನೆ ಛತ್ತೀಸ್ ಗಢದ ಬಂಡುಕೋರ ವಲಯ ರಾಜ್ನಂದಗಾವ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಛತ್ತೀಸ್ ಗಢದ ಖಡ್ಗೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪೆಂಕಡ್ಗ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಬಂಡುಕೋರರ ಮಧ್ಯೆ ಗುಂಡಿನ ಚಕಮಕಿ ಆರಂಭಗೊಂಡಿತು. ಭದ್ರತಾ ಪಡೆ ಮತ್ತು ಮಾವೋವಾದಿ ವಿರೋಧಿ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಪ್ರಶಾಂತ್ ಅಗರ್ ವಾಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರತ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಡಿಲ್ಲಾ ಪಡೆ ನೇತೃತ್ವದ ಮಾಲ್ಪುರ್ ಉಪ ವಲಯ ಅಧಿಕಾರಿ ಆಕಾಶ್ ಗಿರ್ಪುಂಜೆ ನೇತೃತ್ವದ ಜಂಟಿ ತಂಡ ರಾಯ್ಪುರದಿಂದ 200 ಕಿಲೋ ಮೀಟರ್ ದೂರದಲ್ಲಿರುವ ಮಾನ್ಪುರದ ಒಳ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ತೀವ್ರ ಗುಂಡಿನ ಚಕಮಕಿ ನಡೆದು ಮೂವರು ಬಂಡುಕೋರರು ಹತರಾಗಿದ್ದಾರೆ. ಇವರ ಬಳಿಯಿದ್ದ ಎಕೆ 47 ರೈಫಲ್, ಒಂದು ಇನ್ಸಾಸ್ ರೈಫಲ್, ಒಂದು ಎಸ್ಎಲ್ಆರ್ ರೈಫಲ್ ನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


