ಚು.ಆಯೋಗದ ಲಂಚ ಪ್ರಕರಣದ ಆರೋಪಿಗೆ ತಿರುಗಾಡಲು ಮುಕ್ತ ಅವಕಾಶ: 7 ಪೊಲೀಸರು ಅಮಾನತು
ಚುನವಣಾ ಆಯೋಗದ ಲಂಚ ಪ್ರಕರಣದ ಆರೋಪಿಯಾಗಿರುವ ಬಂಧಿತ ಮಧ್ಯವರ್ತಿಯೊಬ್ಬನಿಗೆ ಹೊರಗೆ ತಿರುಗಾಡಲು ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ 7 ಪೊಲೀಸ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾಮಾಡಲಾಗಿದೆ.

Published On :
ನವದೆಹಲಿ: ಚುನವಣಾ ಆಯೋಗದ ಲಂಚ ಪ್ರಕರಣದ ಆರೋಪಿಯಾಗಿರುವ ಬಂಧಿತ ಮಧ್ಯವರ್ತಿಯೊಬ್ಬನಿಗೆ ಹೊರಗೆ ತಿರುಗಾಡಲು ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ 7 ಪೊಲೀಸ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾಮಾಡಲಾಗಿದೆ.
ಎಐಎಡಿಎಂಕೆ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಎಐಎಡಿಎಂಕೆ ಮುಖಂಡ ಟಿಟಿವಿ ದಿನಕರನ್ ನಿಂದ ಹಣ ಪಡೆದಿದ್ದ ಆರೋಪ ಎದುರಿಸುತ್ತಿದ್ದ ಸುಖೇಶ್ ಚಂದ್ರಶೇಖರ್ ನನ್ನು ಏಪ್ರಿಲ್ 16 ರಂದು ಪೊಲೀಸರು ಬಂಧಿಸಿದ್ದರು.
ಅ.9 ಹಾಗೂ 16 ರಂದು ವಿಚಾರಣೆಗಾಗಿ ಕೋರ್ಟ್ ಗೆ ಕರೆದೊಯ್ಯಲು ಚಂದ್ರಶೇಖರ್ ಗೆ ದೆಹಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಗೆ ಸಲ್ಲಿಸಿದ್ದ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಚಂದ್ರಶೇಖರ್ ಗೆ ಹೊರಗೆ ಓಡಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲದೇ ಬ್ಯುಸಿನೆಸ್ ಡೀಲ್ ಗಳನ್ನು ಕುದುರಿಸಲೂ ಸಹ ಅವಕಾಶ ಮಾಡಿಕೊಡಲಾಗಿತ್ತು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಮುಖ್ಯ ವಕ್ತಾರ ಹಾಗೂ ವಿಶೇಷ ಆಯುಕ್ತ(ಟ್ರಾಫಿಕ್) ದೀಪೇಂದ್ರ ಪಾಠಕ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಮಾನತುDelhi Policeಚುನಾವಣಾ ಆಯೋಗದೆಹಲಿ ಪೊಲೀಸರುಲಂಚ ಪ್ರಕರಣEC bribery case accusedcops suspendedಪೊಲೀಸ್ ಸಿಬ್ಬಂದಿಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


