ದೇಶ

ಕದ್ದ ಭೂಮಿಯಲ್ಲಿ ತಾಜ್ ಮಹಲ್ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ

ಕಳ್ಳತನ ಮಾಡಿದ್ದ ಭೂಮಿಯಲ್ಲಿ 'ತಾಜ್ ಮಹಲ್'ನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಬುಧವಾರ ಹೇಳಿದ್ದಾರೆ...

ಕದ್ದ ಭೂಮಿಯಲ್ಲಿ ತಾಜ್ ಮಹಲ್ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Published On :
ನವದೆಹಲಿ: ಕಳ್ಳತನ ಮಾಡಿದ್ದ ಭೂಮಿಯಲ್ಲಿ 'ತಾಜ್ ಮಹಲ್'ನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಬುಧವಾರ ಹೇಳಿದ್ದಾರೆ. 
ತಾಜ್ ಮಹಲ್ ಕುರಿತಂತೆ ಎದ್ದಿರುವ ವಿವಾದ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಮೊಘಲರ ಸಾಮ್ರಾಜ್ಯವನ್ನಾಳಿದ ಸುಲ್ತಾನ ಷಹ ಜಹಾನ್ ಜೈಪುರ ರಾಜನಿಂದ ಭೂಮಿಯನ್ನು ಕಳ್ಳತನ ಮಾಡಿದ್ದ. ಆ ಭೂಮಿಯಲ್ಲಿ ತಾಜ್ ಮಹಲ್'ನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಸಾಬೀತು ಪಡಿಸಲು ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ. 
ಪ್ರಸ್ತುತ ತಾಜ್ ಮಹಲ್ ಇರುವ ಸ್ಥಳ ಜೈಪುರ ರಾಜ ಮಹಾರಾಜನಿಂದ ಬಲವಂತದಿಂದ ಪಡೆದುಕೊಂಡ ಭೂಮಿಯಾಗಿದೆ. ಈ ಬಗ್ಗೆ ಸಾಕಷ್ಟು ಪುರಾವೆ ಹಾಗೂ ದಾಖಲೆಗಳಿವೆ.  ತಾಜ್ ಮಹಲ್ ಇರುವ ಸ್ಥಳವನ್ನು ರಾಜನಿಂದ ಪಡೆದುಕೊಂಡು ಅದಕ್ಕೆ ಪರಿಹಾರವಾಗಿ ಷಹ ಜಹಾನ್ ಕೆಲ ಗ್ರಾಮಗಳನ್ನು ನೀಡಿದ್ದ. ಇದರ ಆಸ್ತಿಯ ಮೌಲ್ಯಕ್ಕೆ ಹೋಲಿಸಿದರೆ ಆ ಗ್ರಾಮಗಳು ಏನೇನೂ ಅಲ್ಲ.

ಇದಲ್ಲದೆ, ತಾಜ್ ಮಹಲ್ ಇದ್ದ ಸ್ಥಳದಲ್ಲಿ ದೇಗುಲ ಇತ್ತು ಎಂಬುದನ್ನು ದಾಖಲೆಗಳೇ ಹೇಳುತ್ತವೆ. ಆದರೆ, ದೇಗಲುನ್ನು ಧ್ವಂಸಗೊಳಿಸಿ ತಾಜ್ ಮಹಲ್ ನಿರ್ಮಾಣ ಮಾಡಿರುವ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ ಎಂದು ತಿಳಿಸಿದ್ದಾರೆ. 

ತಾಜ್ ಮಹಲ್ ನ್ನು ಧ್ವಂಸಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ. ಆದರೆ, ಮುಸ್ಲಿಮರ ಆಳ್ವಿಕೆಯಲ್ಲಿ ಮೂರು ದೇಗುಲಗಳು ನಾಶಗೊಂಡಿದ್ದವು ಎಂಬುದನ್ನು ತಿಳಿಸಲು ಇಚ್ಛಿಸುತ್ತೇವೆ. ಇಸ್ಲಾಮಿಕ್ ಅವಧಿಯಲ್ಲಿ ಧ್ವಂಸಗೊಳಿಸಲಾಗಿದ್ದ ಎಲ್ಲಾ ದೇಗುಲಗಳಲ್ಲಿ ಮೂರು ದೇಗುಲಗಳು ನಿರ್ಮಾಣವಾಗಬೇಕಿದೆ. ಅಯೋಧ್ಯೆಯಲ್ಲಿ ರಾಮ, ಮಥುರಾದಲ್ಲಿ ಕೃಷ್ಣ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇಗುಲ ನಿರ್ಮಾಣವಾಗಬೇಕಿದೆ. ಈ ಮೂರು ದೇಗುಲಗಳು ನಿರ್ಮಾಣವಾಗಿದ್ದೇ ಆದರೆ, ಉಳಿದ ಸಾವಿರಾರು ದೇಗುಲಗಳ ಬಗ್ಗೆ ನಾವು ಮಾತನಾಡುವುದಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.