ದೇಶ

ಅ.24 ರಂದು ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಳಿಯಲಿವೆ ಐಎಎಫ್ ಫೈಟರ್ ಜೆಟ್, ಯಾಕೆ ಗೊತ್ತೆ?

ಅ.24 ರಂದು ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಐಎಎಫ್ ಜೆಟ್ ಗಳು ಬಂದಿಳಿಯಲಿವೆ.

ಅ.24 ರಂದು ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಳಿಯಲಿವೆ ಐಎಎಫ್ ಫೈಟರ್ ಜೆಟ್, ಯಾಕೆ ಗೊತ್ತೆ?
ಐಎಎಫ್
Published On :
ನವದೆಹಲಿ: ಅ.24 ರಂದು ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಐಎಎಫ್ ಜೆಟ್ ಗಳು ಬಂದಿಳಿಯಲಿವೆ. 
ಭಾರತೀಯ ವಾಯುಪಡೆ, ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೈಗೊಂಡಿರುವ ಕಾರ್ಯಾಚರಣೆಯ ತಾಲೀಮಿನ ಭಾಗವಾಗಿ 32 ಟ್ರಾಸ್ಪೋರ್ಟ್ ವಿಮಾನಗಳು, ಎಸ್ ಯು-30 ಸೇರಿದಂತೆ ಐಎಎಫ್ ನ ಮುಂಚೂಣಿಯಲ್ಲಿರುವ ಫೈಟರ್ ಜೆಟ್ ಗಳು ಹಾಗೂ ಮಿರಾಜ್-2000 ವಿಮಾನಗಳು ಹೆದ್ದಾರಿಯಲ್ಲಿ ಬಂದಿಳಿಯಲಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
ಹೆದ್ದಾರಿಗಳಲ್ಲಿ ಫೈಟರ್ ಜೆಟ್ ಗಳನ್ನು ಇಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ 2016 ರ ಮೇ 21 ರಂದು ಮಿರಾಜ್-2000 ಫೈಟರ್ ವಿಮಾನ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಲ್ಯಾಂಡ್ ಆಗಿತ್ತು. ಇದೇ ಮಾದರಿಯಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡಿಸಲು 12 ಹೈವೆ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರು ಹೆದ್ದಾರಿಗಳು ನಕ್ಸಲರು ಹೆಚ್ಚಿರುವ ಹಾಗೂ ಪದೇ ಪದೇ ಪ್ರವಾಹ ಉಂಟಾಗುವ ಒಡಿಶಾ, ಜಾರ್ಖಂಡ್, ಚತ್ತೀಸ್ ಗಢವನ್ನು ಸಂಪರ್ಕಿಸುತ್ತವೆ. ಈ ಹೆದ್ದಾರಿಗಳನ್ನು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.