ದೇಶ

ಕಣ್ಣಿನ ಕ್ಯಾನ್ಸರ್: ಪಾಕ್ ಬಾಲಕಿಗೆ ವೀಸಾ ನೀಡುವಂತೆ ಸುಷ್ಮಾ ಸ್ವರಾಜ್ ಸೂಚನೆ

ಕಣ್ಣಿನ ಕ್ಯಾನ್ಸರ್'ನಿಂದ ಬಳಲುತ್ತಿರುವ 5 ವರ್ಷದ ಬಾಲಕಿಗೆ ಚಿಕಿತ್ಸೆ ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದೇಶಾಂಗ...

ಕಣ್ಣಿನ ಕ್ಯಾನ್ಸರ್: ಪಾಕ್ ಬಾಲಕಿಗೆ ವೀಸಾ ನೀಡುವಂತೆ ಸುಷ್ಮಾ ಸ್ವರಾಜ್ ಸೂಚನೆ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Published On :
ನವದೆಹಲಿ: ಕಣ್ಣಿನ ಕ್ಯಾನ್ಸರ್'ನಿಂದ ಬಳಲುತ್ತಿರುವ 5 ವರ್ಷದ ಬಾಲಕಿಗೆ ಚಿಕಿತ್ಸೆ ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಸೂಚಿಸಿದ್ದಾರೆ. 
ತಮ್ಮ ಪುತ್ರಿ ಕಣ್ಣಿನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಕೆಲ ದಿನಗಳ ಹಿಂದಷ್ಟೇ ಬಾಲಕಿಯ ಪೋಷಕರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ನೆರವು ಕೋರಿದ್ದರು. 
ಈ ಮನವಿಗೆ ಸ್ಪಂದನೆ ನೀಡಿರು ಸುಷ್ಮಾ ಸ್ವರಾಜ್ ಅವರು ಕಣ್ಮಿನ ಕ್ಯಾನ್ಸರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕಿ ಅನಮ್ತಾ ಫಾರುಕ್ ಗೆ ವೀಸಾ ನೀಡಬೇಕೆಂಬ ಮನವಿ ಮಾಡಲಾಗಿತ್ತು. ಕೂಡಲೇ ಬಾಲಕಿಗೆ ವೀಸಾ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಮೂಳೆ ಮಜ್ಜೆಯ ಕಸಿ ಕಸಿ ಚಿಕಿತ್ಸೆಗೆ ಒಳಗಾಗಲಿರುವ ಪಾಕಿಸ್ತಾನದ ಬಾಲಕನೊಬ್ಬನಿಗೂ ವೀಸಾ ನೀಡಲುವಂತೆ ಸುಷ್ಮಾ ಸೂಚಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.