ಆಲ್ವಾರ್: ಮುಸ್ಲಿಂ ಕುಟುಂಬದ 51 ಗೋವುಗಳನ್ನು ಬಲವಂತವಾಗಿ ವಶಕ್ಕೆ ಪಡೆದು ಗೋಶಾಲೆಗೆ ನೀಡಿದ ಪೊಲೀಸರು
ಮುಸ್ಲಿಂ ಕುಟುಂಬದ ಬಳಿಯಿದ್ದ 51 ಗೋವುಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ....

Published On :
ಆಲ್ವಾರ್: ಮುಸ್ಲಿಂ ಕುಟುಂಬದ ಬಳಿಯಿದ್ದ 51 ಗೋವುಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.
ರಾಜಸ್ತಾನದ ಆಲ್ವಾರ್ ನಲ್ಲಿರುವ ಮಸ್ಲಿಂ ಕುಟುಂಬದ ವಿರುದ್ಧ ನೀಡಿದ ಹಿಂದೂ ಕಾರ್ಯಕರ್ತರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಹಸುಗಳನ್ನು ವಶಕ್ಕೆ ಪಡೆದು, ಗೋಶಾಲೆಗೆ ನೀಡಿದ್ದಾರೆ, ಇದರಲ್ಲಿ ತಮ್ಮ ಪಾತ್ರ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 10 ದಿನಗಳಿಂದ ಈ ಕುಟುಂಬವು ತಮ್ಮ ಹಸುಗಳನ್ನು ವಾಪಾಸ್ ಪಡೆಯಲು ಪ್ರಯತ್ನಿಸುತ್ತಿದೆ. ಪೊಲೀಸರು ತಮ್ಮ ಹಸುಗಳನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸುಬ್ಬಾಖಾನ್ ಆರೋಪಿಸಿದ್ದಾರೆ. ಖಾನ್ ಅವರ ಮನೆಯಲ್ಲಿ ಸುಮಾರು 17 ಕರುಗಳಿದ್ದು, ಅವುಗಳಿಗೆ ಬಾಟಲ್ ಮೂಲಕ ಹಾಲು ನೀಡಲಾಗುತ್ತಿದೆ. ಈ ಸಂಬಂಧ ತಮ್ಮ ಮನೆಯಲ್ಲಿ ಹಾಲು ಕರೆಯುವ ಹಸುಗಳು ಹಾಗೂ ಕರುಗಳಿವೆ ಎಂದು ಸುಬ್ಬಾಖಾನ್ ಪೊಲೀಸರಿಗೆ ಪ್ರಮಾಣ ಪತ್ರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


