ದೇಶ

ಮೋಹಿನಿ ಕಾಟಕ್ಕೆ ಹೆದರಿ ಗ್ರಾಮ ತೊರೆದ ಕುಟುಂಬಗಳು!

ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಾಶಿಗುಡ ಗ್ರಾಮದ ಕೆಲ ಕುಟುಂಬಗಳು ಹೆಣ್ಣು ಭೂತ ಕಾಟಕ್ಕೆ ಹೆದರಿ ಗ್ರಾಮ ತೊರೆಯುತ್ತಿರುವ ಘಟನೆ ವರದಿಯಾಗಿದೆ...

ಮೋಹಿನಿ ಕಾಟಕ್ಕೆ ಹೆದರಿ ಗ್ರಾಮ ತೊರೆದ ಕುಟುಂಬಗಳು!
ಸಂಗ್ರಹ ಚಿತ್ರ
Published On :
ಹೈದರಾಬಾದ್: ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಾಶಿಗುಡ ಗ್ರಾಮದ ಕೆಲ ಕುಟುಂಬಗಳು ಮೋಹಿನಿಗೆ ಕಾಟಕ್ಕೆ ಹೆದರಿ ಗ್ರಾಮ ತೊರೆಯುತ್ತಿರುವ ಘಟನೆ ವರದಿಯಾಗಿದೆ. 
ಕತ್ತಲಾದ ಮೇಲೆ ಈ ಗ್ರಾಮದಲ್ಲಿ ಹೆಣ್ಣು ಭೂತ ಪುರುಷರ ಮೇಲೆ ಮಾತ್ರ ದಾಳಿ ಮಾಡುತ್ತಿದೆಯಂತೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುವಂತಾಗಿದೆ. 
ಈ ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ಮಾತ್ರ ವಾಸವಿದ್ದು ಇಲ್ಲಿ ವಾಸಿಸಲು ಪುರುಷರೀಗ ಭಯ ಪಡುತ್ತಿದ್ದಾರೆ. ಅಲ್ಲಿ ಅಸ್ವಾಭಾವಿಕ ಘಟನೆ ನಡೆಯುತ್ತಿರುವುದರಿಂದ ಅಲ್ಲಿಯ ಕುಟುಂಬಗಳು ಗ್ರಾಮವನ್ನೇ ಬಿಟ್ಟು ಹೋಗುತ್ತಿವೆ. 
ಇನ್ನು ಗ್ರಾಮದಲ್ಲಿ ಉಳಿದುಕೊಂಡವರು ಸೂರ್ಯ ಮುಳುಗುವ ಮುಂಚೆ ಮನೆ ಸೇರಿದರೆ ಸೂರ್ಯ ಉದಯಿಸಿದ ನಂತರವಷ್ಟೇ ಮನೆಯಿಂದ ಹೊರಗೆ ಬರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.