ಜೆಡಿಯು ಶಾಸಕನ ಡರ್ಟಿ ಡ್ಯಾನ್ಸ್ ವಿಡಿಯೋ ವೈರಲ್: ನಿತೀಶ್ ಕುಮಾರ್ ಟಾರ್ಗೆಟ್ ಮಾಡಿದ ಆರ್ ಜೆಡಿ
ಜೆಡಿಯು ಶಾಸಕನೋರ್ವ ಮಹಿಳೆಯ ಜೊತೆ ವೇದಿಕೆಯ ಮೇಲೆ ಅಸಭ್ಯವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ..

Published On :
ಪಾಟ್ನಾ: ಜೆಡಿಯು ಶಾಸಕನೋರ್ವ ಮಹಿಳೆಯ ಜೊತೆ ವೇದಿಕೆಯ ಮೇಲೆ ಅಸಭ್ಯವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದನ್ನೆ ವಿರೋಧ ಪಕ್ಷ ಆರ್ ಜೆಡಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ತಿಕಾರಿ ಶಾಸಕ ಅಭಯ್ ಕುಮಾರ್ ಸಿನ್ಹಾ ಮಹಿಳೆಯ ಜೊತೆ ಡ್ಯಾನ್ಸ್ ಮಾಡಿರುವ 43 ನಿಮಿಷಗಳ ವಿಡಿಯೋ ವೈರಲ್ ಆಗಿದೆ. ಆರ್ ಜೆಡಿ ಇದನ್ನು ಬಂಡವಾಳವನ್ನಾಗಿಸಿಕೊಂಡು ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದೆ, ಕಳೆದ ಜುಲೈ ನಲ್ಲಿ ಲಾಲು ಪ್ರಸಾದ್ ಯಾದವ್ ಜೊತೆಗಿನ ಮಹಾ ಘಟ ಬಂಧನ್ ದಿಂದ ಹೊರ ಬಂದಿದ್ದ ನಿತೀಶ್ ಬಿಜೆಪಿ ಜೊತೆ ಕೈ ಜೋಡಿಸಿ ಬಿಹಾರದಲ್ಲಿ ಸರ್ಕಾರ ರಚಿಸಿದ್ದರು. ಜೊತೆಗೆ ತಮ್ಮ ಆತ್ಮಸಾಕ್ಷಿಯ ಮಾತಿಗೆ ಓಗೊಟ್ಟು ಮೈತ್ರಿಯಿಂದ ಹೊರಬಂದಿದ್ದಾಗಿ ನಿತೀಶ್ ಹೇಳಿದ್ದರು.
ತಿಕಾರಿಯಿಂದ ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾಗಿರುವ ಸಿನ್ಹಾ ಮಹಿಳೆಯ ದೇಹವನ್ನು ಆಗಾಗ ಮುಟ್ಟುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಸಿನ್ಹಾ, ತಮ್ಮ ರಾಜಕೀಯ ವಿರೋಧಿಗಳ ಪಿತೂರಿ ಇದು. ಕಳೆದ ಎರಡು ವರ್ಷಗಳಲ್ಲಿ ತನ್ನ ವಿರೋಧಿಗಳು ಈ ವಿಡಿಯೋವನ್ನು ಎರಡು ಬಾರಿ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅದು 2013 ರಲ್ಲಿ ನಡೆದದ್ದು, ಆ ವಿಡಿಯೋದಲ್ಲಿರುವುದು ನಾನೇ, 2015 ರ ವಿಧಾನಸಭೆ ಚುನಾವಣೆ ವೇಳೆ ನನ್ನ ವಿರುದ್ಧ ಈ ವಿಡಿಯೋವನ್ನು ಬಳಸಿಕೊಂಡು ಮತದಾರರ ಕಣ್ಣಿಗೆ ನನ್ನನ್ನು ಕೆಟ್ಟವನನ್ನಾಗಿ ಬಿಂಬಿಸಲು ಸಂಚು ಮಾಡಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ, ಈಗಲೂ ಮತ್ತೆ ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಯು ಮಾಜಿ ಶಾಸಕ ಅನಿಲ್ ಕುಮಾರ್ ಅವರ ವಿವಾಹದ ಸಮಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಡಿದ್ದ ಡ್ಯಾನ್ಸ್ ಅದು, ಅವರ ಪಾಟ್ನಾದ ಮನೆಯಲ್ಲಿ ನಡೆದ ಕಾರ್ಯಕ್ರಮವನ್ನು ಯಾರೋ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥಹ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ ಎಂದು ಜೆಡಿಯು ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


