ದೇಶ

ಹುತಾತ್ಮರ ಕುಟುಂಬಗಳಿಗೆ ಸ್ವಯಂಪ್ರೇರಿತ ಧನ ಸಹಾಯ ಮಾಡಿ: ಸರ್ಕಾರಿ ನೌಕರರಿಗೆ ರಕ್ಷಣಾ ಸಚಿವಾಲಯ ಮನವಿ

ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಧನ ಸಹಾಯ ಮಾಡುವಂತೆ ಕೇಂದ್ರದ ಎಲ್ಲಾ ಸರ್ಕಾರಿ ನೌಕರರಿಗೆ...

ಹುತಾತ್ಮರ ಕುಟುಂಬಗಳಿಗೆ ಸ್ವಯಂಪ್ರೇರಿತ ಧನ ಸಹಾಯ ಮಾಡಿ: ಸರ್ಕಾರಿ ನೌಕರರಿಗೆ ರಕ್ಷಣಾ ಸಚಿವಾಲಯ ಮನವಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Published On :
ನವದೆಹಲಿ: ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಧನ ಸಹಾಯ ಮಾಡುವಂತೆ ಕೇಂದ್ರದ ಎಲ್ಲಾ ಸರ್ಕಾರಿ ನೌಕರರಿಗೆ ರಕ್ಷಣಾ ಸಚಿವಾಲಯ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 
ಹುತಾತ್ಮ ಯೋಧರ ಕುಟುಂಬಗಳಿಗೆ ಧನ ಸಹಾಯ ಮಾಡುವ ಕುರಿತು ಎಲ್ಲಾ ಸಚಿವಾಲಯಗಳಿಗೆ ಆದೇಶ ಹೊರಡಿಸುವಂತೆ ಸರ್ಕಾರಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ರಕ್ಷಣಾ ಸಚಿವಾಲಯ ಕೇಳಿಕೊಂಡಿದೆ. 
ಹುತಾತ್ಮ ವೀರ ಯೋಧರ ಕುಟುಂಬಗಳ ಕಲ್ಯಾಣ ಮತ್ತು ಪುನರ್ವಸತಿಗಾಗಿ ಸ್ಥಾಪಿತಗೊಂಡಿರುವ ಮಾಜಿ ಯೋಧರ ಕಲ್ಯಾಣ ಇಲಾಖೆಗೆ ಸ್ವಯಂಪ್ರೇರಿತರಾಗಿ ಕನಿಷ್ಟ ರೂ.200 ಸಹಾಯ ಮಾಡಲು ರಕ್ಷಣಾ ಸಚಿವಾಲಯ ಕೋರಿದೆ. 
49.26 ಲಕ್ಷ ಕೇಂದ್ರದ ಸರ್ಕಾರಿ ನೌಕರರಿದ್ದಾರೆ. ನವೆಂಬರ್ ತಿಂಗಳ ಸಂಬಳದಲ್ಲಿ ಕನಿಷ್ಟ ರೂ.200 ಸಹಾಯ ಮಾಡುವಂತೆ ಎಲ್ಲಾ ನೌಕರರಿಗೆ ತಿಳಿಸುವಂತೆ ಸಚಿವಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಧನ ಸಹಾಯ ಮಾಡುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ ಎಂದೂ ಕೂಡ ತಿಳಿಸಲಾಗಿದೆ. 
ಮುಂಬರುವ ಡಿಸೆಂಬರ್ ತಿಂಗಳ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಡೆಯಲಿದ್ದು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರವ ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರಿ ನೌಕರರಿಂದ ಪಡೆದುಕೊಂಡಿರುವ ಹಣವನ್ನು ವಿತರಿಸಲಾಗುತ್ತದೆ. ಹೀಗಾಗಿ ಧ್ವಜ ದಿನಾಚರಣೆಗೂ ಮುಂಚಿತವಾಗಿಯೇ ಧನ ಸಹಾಯ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.