ಅರುಷಿ ಹತ್ಯೆ ಪ್ರಕರಣ: ಟೈಮ್ ಲೈನ್
ಅಲಹಾಬಾದ್ ಹೈಕೋರ್ಟ್, 2008 ರಲ್ಲಿ ನಡೆದ ಆರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಲಿದೆ.

Published On :
ಅಲಹಾಬಾದ್: ಅಲಹಾಬಾದ್ ಹೈಕೋರ್ಟ್, 2008 ರಲ್ಲಿ ನಡೆದ ಆರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ ಸಂಬಂಧಿಸಿ ಇಂದು ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಅರುಷಿ ಕೊಲೆ ಪ್ರಕರಣ ಸಾಗಿ ಬಂದ ಹಾದಿಯತ್ತ ಒಂದು ನೋಟ-
2008
ಮೇ 15-16: ನೋಯ್ಡಾದ ಫ್ಲಾಟ್ ನ ಮಲಗುವ ಕೋಣೆಯಲ್ಲಿ ಅರುಷಿ ತಲ್ವಾರ್ ಮೃತದೇಹ ಪತ್ತೆಯಾಗಿತ್ತು.
ಮೇ 16: ಉತ್ತರ ಪ್ರದೇಶದ ಪೋಲೀಸರು ಪ್ರಕರನದ ತನಿಖೆ ಪ್ರಾರಂಭಿಸಿದ್ದರು. ನೇಪಾಳಿ ಮೂಲದ ಸಹಾಯಕ ಹೇಮ್ ರಾಜ್ ನನ್ನು ಹತ್ಯೆಯ ಯ ಶಂಕಿತನೆಂದು ಬಗೆಯಲಾಗಿತ್ತು.
ಮೇ 17: ಹೇಮ್ ರಾಜ್ ಮೃತದೇಹವು ಅ ತಲ್ವಾರ್ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು
ಮೇ 18: ಉತ್ತರ ಪ್ರದೇಶ ಪೋಲಿಸ್ ಅವಳಿ ಕೊಲೆಗಳನ್ನು ತನಿಖೆ ತೀವ್ರಗೊಳಿಸಿದ್ದರು. ಮನೆಯೊಳಗಿನವರೇ ಕೊಲೆಗಳನ್ನು ಮಾಡಿದ್ದಾರೆಂದು ಶಂಕಿಸಿದ್ದರು.
ಮೇ 19: ತಲ್ವಾರ್ ಕುಟುಂಬದ ಮಾಜಿ ಸಹಾಯಕಿ ವಿಷ್ಣು ಶರ್ಮಾ ಶಂಕಿತನೆಂದು ಹೇಳಲಾಯಿತು.
ಮೇ 21: ಅವಳಿ ಕೊಲೆ ತನಿಖೆಗೆ ದೆಹಲಿ ಪೋಲೀಸರು ಕೈ ಜೋಡಿಸಿದರು.
ಮೇ 22: ತಲ್ವಾರ್ ದಂಪತಿಗಳ ಮೇಲೆಯೂ ಹತ್ಯೆಯ ಶಂಕೆ ವ್ಯಕ್ತಪಡಿಸಲಾಗುತ್ತದೆ. ತನಿಖೆ ನಡೆಸುತ್ತಿದ್ದ ಪೊಲೀಸರು, ಅರುಷಿ ಆತ್ಮೀಯ ಗೆಳತಿಯನ್ನು ವಿಚಾರಣೆ ನಡೆಸುತ್ತಾರೆ. ಆಕೆ 45 ದಿನಗಳಲ್ಲಿ ಅರುಷಿಯೊಡನೆ 688 ಬಾರಿ ಮಾತನಾಡಿದ್ದರು.
ಮೇ 23: ಜೋಡಿ ಕೊಲೆ ಆಪಾದನೆ ಮೇಲೆ ಅರುಷಿ ತಂದೆ ರಾಜೇಶ್ ತಲ್ವಾರ್ ಬಂಧನ.
ಮೇ 29: ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಪೋಲೀಸರಿಂದ ಸಿಬಿಐಗೆ ಹಸ್ತಾಂತರಿಸಲು ನೋಟೀಸ್ ಹೊರಡಿಸಲಾಯಿತು.
ಜೂನ್ 1:ಅರುಷಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಪ್ರಾರಂಭಿಸುತ್ತದೆ
ಜೂನ್ 13: ಸಿಬಿಐ ನಿಂದ ರಾಜೇಶ್ ತಲ್ವಾರ್ ಅವರ ಸಹಾಯಕ ಕೃಷ್ಣ ಬಂಧನ
ಜೂನ್ 20: ದೆಹಲಿಯ ಸಿಎಫ್ ಎಸ್ ಎಲ್ ನಲ್ಲಿ ರಾಜೇಶ್ ತಲ್ವಾರ್ ಸುಳ್ಳು ಪತ್ತೆ ಪರೀಕ್ಷೆ ನಡೆಯಿತು.
ಜೂನ್ 25: ನೂಪುರ್ ತಲ್ವಾರ್ ಗೆ ಎರಡನೇ ಸುಳ್ಳು ಪತ್ತೆ ಪರೀಕ್ಷೆ ನದೆಸಲಾಯಿತು. ಆಕೆಯ ಮೊದಲ ಪರೀಕ್ಷೆಯು ಅಪೂರ್ಣ ಎನ್ನಲಾಗಿತ್ತು.
ಜೂನ್ 26: ಅರುಷಿ ಹತ್ಯಾ ಪ್ರಕರಣವನ್ನು "ಬ್ಲೈಂಡ್ ಕೇಸ್" ಎಂದು ಸಿಬಿಐ ಘೋಷಣೆ. ಘಾಜಿಯಾಬಾದ್ ನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ರಾಜೇಶ್ ತಲ್ವಾರ್ ಜಾಮೀನು ನಿರಾಕರಣೆ.
ಜುಲೈ 12: ಘಾಜಿಯಾಬಾದ್ ದಾಸ್ನಾ ಜೈಲಿನಿಂದ ರಾಜೇಶ್ ತಲ್ವಾರ್ ಜಾಮೀನಿನ ಮೇಲೆ ಬಿಡುಗಡೆ.
2009
ಫೆಬ್ರವರಿ 8-12: ಸಿಬಿಐ ಮನವಿಯ ಮೇರೆಗೆ ಫೆಬ್ರವರಿ 8 ರಿಂದ ಫೆಬ್ರವರಿ 12 ರ ನಡುವೆ ನೂಪುರ್ ತಲ್ವಾರ್ ಗೆ ನಾರ್ಥೋ-ಅನಾಲಿಸಿಸ್ ಪರೀಕ್ಷೆ ನಡೆಯಿತು.
ಫೆಬ್ರವರಿ 15-20: ಫೆಬ್ರವರಿ 15 ರಿಂದ ಫೆಬ್ರವರಿ 20 ರ ನಡುವೆ ರಾಜೇಶ್ ತಲ್ವಾರ್ ಗೆ ನಾರ್ಥೋ-ಅನಾಲಿಸಿಸ್ ಪರೀಕ್ಷೆ ಮಾಡಲಾಗಿತ್ತು.
ಡಿಸೆಂಬರ್ 29: ಅಂತಿಮ ವರದಿಯೊಡನೆ ಪ್ರಕರಣವನ್ನು ಕೊನೆಗೊಳಿಸಿದ ಸಿಬಿಐ. ಪ್ರಕರಣದಲ್ಲಿ ಸೇವಕರು ಕ್ಲೀನ್ ಚಿಪ್ ಪಡೆದರೆ ತಲ್ವಾರ್ ದಂಪತಿಗಳೇ ಅಪರಾಧಿಗಳು ಎನ್ನಲಾಗಿತ್ತು
2010
ಡಿಸೆಂಬರ್ 2010: ರಾಜೇಶ್ ತಲ್ವಾರ್ ಮುಖ್ಯ ಆರೋಪಿ ಎಂದು ಸಿಬಿಐ ಮುಖ್ಯಸ್ಥರ ವರದಿ ಹೇಳಿತ್ತಾದರೂ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ.
2011
ಜನವರಿ 25, 2011: ರಾಜೇಶ್ ತಲ್ವಾರ್ ಮೇಲೆ ನ್ಯಾಯಾಲಯದ ಆವರಣದಲ್ಲಿ ದಾಳಿ ನದೆಯಿತು.
ಫೆಬ್ರವರಿ 9, 2011: ಸಿಬಿಐ ವರದಿಯನ್ನು ತಿರಸ್ಕರಿಸಿದ ಟ್ರಯಲ್ ನ್ಯಾಯಾಲಯ ಕೊಲೆಯ ಆರೋಪಗಳನ್ನು ಎದುರಿಸುತ್ತಿರುವ ತಲ್ವಾರ್ ದಂಪತಿಗೆ ಸಮನ್ಸ್ ಜ್ರಿ ಮಾಡಿತು.
ಫೆಬ್ರವರಿ 21: ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ತಲ್ವಾರ್ ದಂಪತಿಗಳಿಂದ ಅಲಹಾಬಾದ್ ಹೈ ಕೋರ್ಟ್ ಗೆ ಮೊರೆ.
ಮಾರ್ಚ್ 18: ಹೈಕೋರ್ಟ್ ನಿಂದ ತಲ್ವಾರ್ ದಂಪತಿಗಳ ಮನವಿ ತಿರಸ್ಕೃತ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ.
ಮಾರ್ಚ್ 19, 2011: ವಿಚಾರಣೆ ರದ್ದು ಕೋರಿ ಸುಪ್ರೀಂ ಮೆಟ್ಟಿಲೇರಿದ ದಂಪತಿ.
2012
ಜನವರಿ 6, 2012: ತಲ್ವಾರ್ ಅವರ ಮನವಿಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್
2013
ಏಪ್ರಿಲ್ 2013: ಅರುಷಿ ಮತ್ತು ಹೇಮ್ ರಾಜ್, ತಲ್ವಾರ್ ರಿಂದ ಕೊಲ್ಲಲ್ಪಟ್ಟರು ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ.
ಮೇ 3: ಮಾಜಿ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಸಾಕ್ಷಿಯಾಗಿ 14 ಮಂದಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ರಕ್ಷಣಾ ನ್ಯಾಯಾಲಯ ಮನವಿ. ಸಿಬಿಐ ನಿಂದಮನವಿಗೆ ವಿರೋಧ.
ಮೇ 6: 14 ಸಾಕ್ಷಿಗಳನ್ನು ಕರೆಸಿಕೊಳ್ಳುವ ತಲ್ವಾರ್ ಮನವಿಯನ್ನು ವಜಾಗೊಳಿಸಿದ ಟ್ರಯಲ್ ನ್ಯಾಯಾಲಯ . ರಾಜೇಶ್ ಮತ್ತು ನೂಪುರ್ ಹೇಳಿಕೆಗಳನ್ನು ರೆಕಾರ್ಡ್ ಮಾಡುವಂತೆ ಆದೇಶ.
ಮೇ 13: ತಲ್ವಾರ್ ಅರ್ಜಿಯನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್ ನಕಾರ.
ನವೆಂಬರ್ 26: ಘಾಜಿಯಾಬಾದ್ ನ ವಿಶೇಷ ಸಿಬಿಐ ನ್ಯಾಯಾಲಯದಿಂದ ತಲ್ವಾರ್ ಗೆ ಜೀವಾವಧಿ ಶಿಕ್ಷೆ ಪ್ರಕಟ
2017
ಆಗಸ್ಟ್ 1: ಅರುಷಿ ಮತ್ತು ಸಹಾಯದ ಹೇಮ್ ರಾಜ್ ಅವರ ಕೊಲೆಗೆ ಸಂಬಂಧಿಸಿ ರಾಜೇಶ್ ಮತ್ತು ನೂಪುರ್ ತಲ್ವಾರ್ ಸಲ್ಲಿಸಿದ ಮೇಲ್ಮನವಿಗಳನ್ನು ಅಲಹಾಬಾದ್ ಹೈಕೋರ್ಟ್ ಪುನಃ ಹೊಸದಾಗಿ ವಿಚಾರಣೆ ನಡೆಸಲಿದೆ ಎಂದು ಹೇಳಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CBIಸಿಬಿಐAllahabad High Courtಅಲಹಾಬಾದ್ ಹೈಕೋರ್ಟ್Aarushi murderRajesh and Nupur Talwarಅರುಷಿ ಕೊಲೆರಾಜೇಶ್ ಮತ್ತು ನೂಪುರ್ ತಲ್ವಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


