ಗಾಂಧಿ ಹತ್ಯೆ: ಮರು ತನಿಖೆ ಮನವಿ ವಿಚಾರಣೆಗೆ ಮುನ್ನುಡಿ ಬರೆದ ಸುಪ್ರೀಂ ಕೋರ್ಟ್
ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರ್ ಪ್ರಾರಂಭಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.

Published On :
ನವದೆಹಲಿ: ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರ್ ಪ್ರಾರಂಭಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ಸಂಕ್ಷಿಪ್ತ ವಿಚಾರಣೆಯ ನಂತರ ನ್ಯಾಯಮೂರ್ತಿ ಎಸ್ ಎಸ್ ಬೊಬ್ಬೆ ಮತ್ತು ಎಲ್ ನಾಗೇಶ್ವರ ರಾವ್ ಒಳಗೊಂಡ ಪೀಠವು ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೆಂದರ್ ಶರಣ್ ಅವರನ್ನು ನ್ಯಾಯಾಲಯಕ್ಕೆ ಸಹಾಯ ಮಾಡಲು ಅಮಿಕಸ್ ಕ್ಯೂರಿ ಆಗಿ ನೇಮಿಸಿಕೊಂಡಿದೆ.
15 ನಿಮಿಷಗಳ ಕಾಲ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಈ ಹಿಂದೆ ನಡೆಸಿದ್ದ ವಿಚಾರಣೆಯಲ್ಲಿ 'ಯಾವುದೇ ತೀರ್ಮಾನಕ್ಕೆ ಬಂದಿಲ್ಲ' ಎಂಡು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಶರ್ಮಾ, ಇದರ ಕುರಿತಂತೆ ಸದ್ಯಕ್ಕೆ ಯಾವ ತೀರ್ಮಾನ ಕೈಗೊಳ್ಳ ಬರುವುದಿಲ್ಲ. ಮುಂದಿನ ವಿಚಾರಣೆಯನ್ನು ಅ.30ಕ್ಕೆ ನಡೆಸಲಾಗುತ್ತದೆ ಎಂದರು.
ಸಂಶೋಧನಾ ಮತ್ತು ಅಭಿನವ ಭಾರತ ಟ್ರಸ್ಟಿ ಆಗಿರುವ ಮುಂಬಯಿ ಮೂಲದ ಡಾ. ಪಂಕಜ್ ಫಾಡ್ನಿಸ್ ಸಲ್ಲಿಸಿದ ಅರ್ಜಿ ಇದಾಗಿದ್ದು ಹಲವಾರು ದಾಕಲೆಗಳೊದನೆ ಬಾಪೂ ಹತ್ಯೆಯ ತನಿಖೆಯನ್ನು ಮರುಪರಿಶೀಲಿಸುವಂತೆ ಅರ್ಜಿದಾರರು ಕೋರಿದ್ದಾರೆ. ಭಾರತ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ತಿರುವು ಆಗಲಿದೆ ಎನ್ನಲಾಗಿದೆ
ಹಿಂದೂ ರಾಷ್ಟ್ರೀಯತೆಯ ಬಲಪಂಥೀಯ ನಾಥೂರಾಮ್ ವಿನಯಕ್ ಗೋಡ್ಸೆ ಇಂದ ಜನವರಿ 30, 1948 ರಂದು ಗಾಂಧಿ ಗುಂಡೇಟಿಗೆ ಬಲಿಯಾಗಿದ್ದರು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸುಪ್ರೀಂಕೋರ್ಟ್Mahatma Gandhiಮಹಾತ್ಮ ಗಾಂಧಿMahatma Gandhi assassinationಮಹಾತ್ಮಾ ಗಾಂಧಿ ಹತ್ಯೆThe Supreme CourtAmrender Sharanಅಮರೀಂದರ್ ಶರಣ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


