ಇದೇ ಮೊದಲ ಬಾರಿಗೆ ಕೇರಳ ದೇವಸ್ಥಾನಗಳಲ್ಲಿ ಅರ್ಚಕರಾಗಿ ಆರು ದಲಿತರ ನೇಮಕಕ್ಕೆ ಶಿಫಾರಸು
ಇದೇ ಮೊದಲ ಬಾರಿಗೆ ಕೇರಳದ ದೇವಸ್ಥಾನಗಳಲ್ಲಿ ಅರ್ಚಕರಾಗಿ ಆರು ದಲಿತರು ಸೇರಿದಂತೆ 36 ಬ್ರಾಹ್ಮಣೇತರರನ್ನು ...

Published On :
ತಿರುವನಂತಪುರಂ: ಇದೇ ಮೊದಲ ಬಾರಿಗೆ ಕೇರಳದ ದೇವಸ್ಥಾನಗಳಲ್ಲಿ ಅರ್ಚಕರಾಗಿ ಆರು ದಲಿತರು ಸೇರಿದಂತೆ 36 ಬ್ರಾಹ್ಮಣೇತರರನ್ನು ನೇಮಕಮಾಡುವಂತೆ ಕೇರಳ ದೇವಸ್ಥಾನ ನೇಮಕಾತಿ ಮಂಡಳಿ ಶಿಫಾರಸು ಮಾಡಿದೆ.
ಟ್ರವಂಕೊರ್ ದೇವಸ್ಥಾನ ಮಂಡಳಿ(ಟಿಡಿಬಿ) ನಿರ್ವಹಣೆ ಮಾಡುತ್ತಿರುವ ದೇವಸ್ಥಾನಗಳಲ್ಲಿ ಇದೇ ಮೊದಲ ಬಾರಿಗೆ ಆರು ದಲಿತರನ್ನು ಅರ್ಚಕರಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿರುವುದಾಗಿ ಕೇರಳ ದೇವಸ್ಥಾನ ನೇಮಕಾತಿ ಮಂಡಳಿ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕ ಸೇವಾ ಆಯೋಗ(ಪಿಎಸ್ ಸಿ) ಅರೆಕಾಲಿಕ ಅರ್ಚಕ ಹುದ್ದೆಗಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿದ್ದು, ಇದರ ಆಧಾರದ ಮೇಲೆ ಅರ್ಚಕರನ್ನು ನೇಮಕ ಮಾಡಿರುವುದಾಗಿ ದೇವಸ್ಥಾನ ನೇಮಕಾತಿ ಮಂಡಳಿ ಹೇಳಿದೆ.
ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲೆ ಅರ್ಚಕರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ನೀಡಿಲ್ಲ ಎಂದು ದೇವಸ್ಥಾನಂ ಸಚಿವ ಕಡಕಂಪಲ್ಯ ರಾಮಚಂದ್ರನ್ ಅವರು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


