ಅಭಿಮಾನಿಗೆ ಮತ್ತೆ ಕಪಾಳ ಮೋಕ್ಷ ಮಾಡಿ ಸುದ್ದಿಗೆ ಗ್ರಾಸವಾದ ಬಾಲಯ್ಯ!
ಟಾಲಿವುಡ್ ನ ಖ್ಯಾತ ನಟ ಹಾಗೂ ಟಿಡಿಪಿ ಶಾಸಕರಾದ ಬಾಲಕೃಷ್ಣ ಅವರು ಮತ್ತೆ ಅಭಿಮಾನಿಯೊಬ್ಬರಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

Published On :
ಹಿಂದೂಪುರ: ಟಾಲಿವುಡ್ ನ ಖ್ಯಾತ ನಟ ಹಾಗೂ ಟಿಡಿಪಿ ಶಾಸಕರಾದ ಬಾಲಕೃಷ್ಣ ಅವರು ಮತ್ತೆ ಅಭಿಮಾನಿಯೊಬ್ಬರಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಿಮಿತ್ತ ನಟ ಬಾಲಕೃಷ್ಣ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಮನೆ ಮನೆ ಪ್ರಚಾರ ಕೈಗೊಂಡಿದ್ದ ಅವರ ಪಕ್ಷದ ಭಿತ್ತಿ ಪತ್ರಗಳನ್ನು ಜನರಿಗೆ ನೀಡುತ್ತಿದ್ದರು. ನಟ ಬಾಲಕೃಷ್ಣ ಬಂದ ಕಾರಣ ಜನರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ನೂಕುನುಗ್ಗಲಾಗಿ ಓರ್ವ ವ್ಯಕ್ತಿ ಬಾಲಯ್ಯ ಅವರ ಭದ್ರತಾ ಸಿಬ್ಬಂದಿಯನ್ನು ಮುಂದಕ್ಕೆ ತಳ್ಳಿದ್ದಾನೆ. ಇಷ್ಟಕ್ಕೇ ಕೋಪಗೊಂಡ ಬಾಲಕೃಷ್ಣ ಕೂಡಲೇ ತಳ್ಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದು ಹಿಂದೆ ನಿಲ್ಲುವಂತೆ ಗದರಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆಯೂ ಕೂಡ ಅಭಿಮಾನಿಯೊಬ್ಬರಿಗೆ ನಟ ಬಾಲಕೃಷ್ಣ ಕಪಾಳ ಮೋಕ್ಷ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ನಂದ್ಯಾಲ್ ಕ್ಷೇತ್ರ ಉಪ ಚುನಾವಣೆ ನಿಮಿತ್ತ ಪ್ರಚಾರ ಕೈಗೊಂಡಿದ್ದ ಬಾಲಕೃಷ್ಣ ತಮ್ಮೊಂದಿಗೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆತನ ಕಪಾಳಕ್ಕೆ ಹೊಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್TDPAndhra Pradeshಆಂಧ್ರ ಪ್ರದೇಶNandamuri Balakrishnaನಂದಮೂರಿ ಬಾಲಕೃಷ್ಣಟಿಡಿಪಿHindupurಹಿಂದೂಪುರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


