ದೇಶ

ಭದ್ರತಾ ವೈಫಲ್ಯ: ಪ್ರಧಾನಿ ಮೋದಿ-ಇವಾಂಕಾ ಡಿನ್ನರ್ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ!

ಇವಾಂಕಾ ಟ್ರಂಪ್ ಅವರ ಭಾರತ ಪ್ರವಾಸಕ್ಕೆ ಭಾರಿ ಭದ್ರತೆ ಕಲ್ಪಿಸಿರುವಂತೆಯೇ ಭದ್ರತೆಯ ಭದ್ರಕೋಟೆಯ ನಡುವೆಯೇ ಭಾರಿ ಭದ್ರತಾ ವೈಫಲ್ಯ ಕಂಡುಬಂದಿದ್ದು, ಪ್ರಧಾನಿ ಮೋದಿ-ಇವಾಂಕಾ ಟ್ರಂಪ್ ಅವರ ಭೋಜನ ಕೂಟವನ್ನು ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದು ನೇರ ಪ್ರಸಾರ ಮಾಡಿದೆ.

ಭದ್ರತಾ ವೈಫಲ್ಯ: ಪ್ರಧಾನಿ ಮೋದಿ-ಇವಾಂಕಾ ಡಿನ್ನರ್ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ!
ಪ್ರಧಾನಿ ಮೋದಿ-ಇವಾಂಕಾ ಟ್ರಂಪ್
Published On :
ಹೈದರಾಬಾದ್: ಇವಾಂಕಾ ಟ್ರಂಪ್ ಅವರ ಭಾರತ ಪ್ರವಾಸಕ್ಕೆ ಭಾರಿ ಭದ್ರತೆ ಕಲ್ಪಿಸಿರುವಂತೆಯೇ ಭದ್ರತೆಯ ಭದ್ರಕೋಟೆಯ ನಡುವೆಯೇ ಭಾರಿ ಭದ್ರತಾ ವೈಫಲ್ಯ ಕಂಡುಬಂದಿದ್ದು, ಪ್ರಧಾನಿ ಮೋದಿ-ಇವಾಂಕಾ ಟ್ರಂಪ್ ಅವರ  ಭೋಜನ ಕೂಟವನ್ನು ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದು ನೇರ ಪ್ರಸಾರ ಮಾಡಿದೆ.
ಇವಾಂಕಾ-ಪ್ರಧಾನಿ ಮೋದಿ ಹೈದರಾಬಾದ್ ನ ಫಲಕ್ನುಮಾ ಪ್ಯಾಲೆಸ್ ನಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಿಂದ ಭದ್ರತಾ ಕಾರಣದಿಂದಾಗಿ ಮಾಧ್ಯಮಗಳನ್ನು ದೂರವಿಡಲಾಗಿತ್ತು. ಇದರ ಹೊರತಾಗಿಯೂ  ಸ್ಥಳೀಯವಾಹಿನಿಯ ಪತ್ರಕರ್ತನೋರ್ವ ಭೋಜನಕೂಟದ ದೃಶ್ಯಾವಳಿಯನ್ನು ನೇರ ಪ್ರಸಾರ ಮಾಡಿದ್ದಾನೆ ಎನ್ನಲಾಗಿದೆ. ಇದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಭದ್ರತಾ ಮೇಲುಸ್ತುವಾರಿ ವಹಿಸಿಕೊಂಡಿರುವ ಎಸ್ ಪಿಜಿ  ಮುಖ್ಯಸ್ಥ ಎಕೆ ಸಿನ್ಹಾ ಅವರು ಪೊಲೀಸ್ ಮಹಾನಿರ್ದೇಶಕ ಪಿ ಮಹೇಂದ್ರ ರೆಡ್ಡಿ ಅವರಿಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅಂತೆಯೇ ಪ್ರಧಾನಿ ಕಚೇರಿಯ ಮುಖ್ಯಕಾರ್ಯದರ್ಶಿಗಳೂ ಕೂಡ ಘಟನೆ ಕುರಿತು ತಮ್ಮ  ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳಿಗೆ ನಿಷೇಧ ವಿದ್ದರೂ ದೃಶ್ಯಾವಳಿ ನೇರ ಪ್ರಸಾರವಾಗಿದ್ದು ಹೇಗೆ?
ಮೂಲಗಳ ಪ್ರಕಾರ ಇವಾಂಕಾ-ಪ್ರಧಾನಿ ಮೋದಿ ಭೋಜನಕೂಟ ಆಯೋಜನೆಯಾಗಿದ್ದ ಹೈದರಾಬಾದ್ ನ ಫಲಕ್ನುಮಾ ಪ್ಯಾಲೆಸ್ ನಲ್ಲಿ ಹೈದರಾಬಾದ್ ಪೊಲೀಸರು ಭದ್ರತಾ ಕಾರಣಗಳಿಂದಾಗಿ ನೂರಾರು ಸಿಸಿಟಿ ಕ್ಯಾಮೆರಾಗಳನ್ನು  ಅಳವಡಿಸಿದ್ದರು. ಈ ಎಲ್ಲ ಕ್ಯಾಮೆರಾಗಳ ನಿಯಂತ್ರಣ ಡಿಜಿಪಿ ಕಚೇರಿಯಲ್ಲಿತ್ತು. ಅಲ್ಲಿಯೇ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡುತ್ತಿದ್ದರು. ಆದರೆ ಪೊಲೀಸ್ ನಿಯಂತ್ರಣ ಕಚೇರಿಗೆ ಆಗಮಿಸಿದ್ದ ವಾಹಿನಿಯ  ಪತ್ರಕರ್ತ ಅಲ್ಲಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯಾವಳಿಗಳನ್ನೇ ನೇರ ಪ್ರಸಾರ ಮಾಡತೊಡಗಿದ್ದಾನೆ ಎನ್ನಲಾಗಿದೆ.
ನೇರ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಕೂಡಲೇ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳಿ ಮಾಹಿತಿ ನೀಡುವ ಮೂಲಕ ನೇರ ಪ್ರಸಾರವನ್ನು ತಡೆದಿದ್ದಾರೆ. ಅಂತೆಯೇ ನೇರ ಪ್ರಸಾರ  ಮಾಡಿದ ವಾಹಿನಿ ಮತ್ತು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.