ದೇಶ

ವಿಶ್ವ ಸುಂದರಿ ಮಾನುಷಿ ಛಿಲ್ಲರ್‌ ಸ್ವದೇಶಕ್ಕೆ ಆಗಮನ

ಪ್ರಸಕ್ತ ಸಾಲಿನ ವಿಶ್ವ ಸುಂದರಿ ಹರಿಯಾಣದ ಮಾನುಷಿ ಛಿಲ್ಲರ್‌ ಸ್ವದೇಶಕ್ಕೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಮಾನುಷಿಗೆ ಭವ್ಯ ಸ್ವಾಗತ ದೊರಕಿದೆ.

ವಿಶ್ವ ಸುಂದರಿ ಮಾನುಷಿ ಛಿಲ್ಲರ್‌ ಸ್ವದೇಶಕ್ಕೆ ಆಗಮನ
ಮಾನುಷಿ ಛಿಲ್ಲರ್‌
Published On :
ಮುಂಬೈ: ಪ್ರಸಕ್ತ ಸಾಲಿನ ವಿಶ್ವ ಸುಂದರಿ ಹರಿಯಾಣದ ಮಾನುಷಿ ಛಿಲ್ಲರ್‌ ಸ್ವದೇಶಕ್ಕೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಮಾನುಷಿಗೆ ಭವ್ಯ ಸ್ವಾಗತ ದೊರಕಿದೆ. 
ವಿಮಾನ ನಿಲ್ದಾಣದಲ್ಲಿ ಸೇರಿದ್ದ ಅವರ ಅಭಿಮಾನಿಗಳು 'ಇಂಡಿಯಾ... ಇಂಡಿಯಾ...' ಎಂದು ಕೇಕೆ ಹಾಕುತ್ತಾ ಹರ್ಷೋದ್ಘಾರ ಮಾಡಿದ್ದಾರೆ. ಇನ್ನು ಕೆಲವರು ರಾಷ್ಟ್ರದ್ವಜ, ಮಾನುಷಿ ಭಾವಚಿತ್ರಗಳನ್ನು ಹಿಡಿದು ಅವರನ್ನು ಸಂತಸದಿಂದ ಬರಮಾಡಿಕೊಂಡರು.
ಹದಿನೇಳು ವರ್ಷಗಳ ಬಳಿಕ ಭಾರತಕ್ಕೆ ಮಿಸ್‌ ವರ್ಲ್ಡ್‌ ಪಟ್ಟ ತಂದುಕೊತ್ಟ ಮಾನುಷಿ ಛಿಲ್ಲರ್‌ "ಸ್ವದೇಶಕ್ಕೆ ಮರಳಿರುವುದು ಸಂತಸ ತಂದಿದೆ. ಅದ್ಧೂರಿ ಸ್ವಾಗತಕ್ಕೆ ಬಹಳ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.