ಪಶ್ಚಿಮ ಬಂಗಾಳ: ಆನೆ ಜತೆ ಫೋಟೋ ತೆಗೆದುಕೊಳ್ಳ ಹೋದ ವ್ಯಕ್ತಿ ದುರ್ಮರಣ
ಆನೆಯ ಫೋಟೋ ತೆಗೆದುಕೊಳ್ಳಲು ವಾಹನದಿಂದ ಹೊರಬಂದ ವ್ಯಕ್ತಿಯೊಬ್ಬ ಅದರಿಂದಲೇ ತುಳಿಸಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಪಶ್ಚಿನ ಬಂಗಾಳದ ದಲ್ಲಿ ನಡೆದಿದೆ.

Published On :
ಕೊಲ್ಕತ್ತಾ: ಆನೆಯ ಫೋಟೋ ತೆಗೆದುಕೊಳ್ಳಲು ವಾಹನದಿಂದ ಹೊರಬಂದ ವ್ಯಕ್ತಿಯೊಬ್ಬ ಅದರಿಂದಲೇ ತುಳಿಸಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಪಶ್ಚಿನ ಬಂಗಾಳದ ದಲ್ಲಿ ನಡೆದಿದೆ.
ಕೋಲ್ಕತ್ತಾದಲ್ಲಿನ ಜಲ್ಪೈಗುರಿ ಜಿಲ್ಲೆಯ ಸಾದಿಖ್ ರೆಹಮಾನ್ (40) ಮೃತಪಟ್ಟಿದ್ದು ಜಾಲ್ಪೈಗುರಿ ಜಿಲ್ಲೆಯಲ್ಲಿರುವ ಲಟಗುರಿ ಅರಣ್ಯ ಪ್ರದೇಶದಲ್ಲಿ ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಆನೆಯೊಂದು ಹಾದುಹೋಗುವಾಗ ಸಾದಿಖ್ ಅದರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಆನೆ ಏಕಾಏಕಿ ಅವನ ಮೇಲೆ ದಾಳಿ ನಡೆಸಿದೆ. ಹೀಗೆ ದಾಳಿಗೊಳಗಾದ ಸಾಧಿಕ್ ರನ್ನು ಪಾರು ಮಾಡುವ ಯಾವ ದಾರಿ ಕಾಣದೆ ಸ್ಥಳದಲ್ಲಿದ್ದ ಸಾರ್ವನಿಕರು ಅಸಹಾಯಕರಾಗಿದ್ದಾರೆ. ಆನೆ ದಾಳಿಗೊಳಗಾದ ಆತನನ್ನು ಆನೆ ಕಾಡಿಗೆ ಹೋದ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ.
ಈ ಪ್ರದೇಶದಲ್ಲಿ ಆನೆಗಳು ಸಾಮಾನ್ಯವಾಗಿದ್ದು, ಪ್ರತಿದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿರುತ್ತವೆ.ಅವುಗಳು ಅತ್ಯಂತ ಅಪಾಯಕಾರಿಯಾಗಿದ್ದು ಸೆಲ್ಫಿಗಾಗಿ ಪ್ರಯತ್ನಿಸುವುದು, ಫೋಟೋ ತೆಗೆಯುವುದನ್ನು ಮಾಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸುತ್ತಿರುತ್ತಾರೆ. ಇಷ್ಟಾದರೂ ಜನರು ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಮಾಹಿತಿಯನುಸಾರ ಕಳೆದೊಂದು ವರ್ಷದಲ್ಲಿ ಈ ಸ್ಥಳದಲ್ಲಿ ಆನೆದಾಳಿಗೆ ಒಳಗಾಗಿ 84 ಜನ ಮೃತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪಶ್ಚಿಮ ಬಂಗಾಳWest BengalElephant tramplesmen killed by elephanttake a photo of an elephantಆನೆ ಸಂಚಾರಆನೆಯಿಂದ ವ್ಯಕ್ತಿ ಸಾವುಆನೆಯ ಫೋಟೋ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


