ದೇಶ

ಮೆಮೆ ವಿವಾದ: ಗುಜರಾತ್ ಬಿಜೆಪಿ ಕಾರ್ಯಕರ್ತರಿಂದ 'ಮನ್ ಕಿ ಬಾತ್' ವಿತ್ ಚಾಯ್

ಗುಜರಾತ್ ಬಿಜೆಪಿ ಕಾರ್ಯಕರ್ತರು ನವೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು....

ಮೆಮೆ ವಿವಾದ: ಗುಜರಾತ್ ಬಿಜೆಪಿ ಕಾರ್ಯಕರ್ತರಿಂದ 'ಮನ್ ಕಿ ಬಾತ್' ವಿತ್ ಚಾಯ್
ಟ್ರೋಲ್ ಮಾಡಿದ್ದ ಚಿತ್ರ
Published On :
ಗಾಂಧಿನಗರ: ಗುಜರಾತ್ ಬಿಜೆಪಿ ಕಾರ್ಯಕರ್ತರು ನವೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಚಾಯ್ ಯೊಂದಿಗೆ ಆಲಿಸುವ ಮೂಲಕ ಮೋದಿ ಅವರನ್ನು ಚಾಯ್ ವಾಲಾ ಎಂದು ಟ್ರೋಲ್ ಮಾಡಿದ್ದ ಯುವ ಕಾಂಗ್ರೆಸ್ ತಿರುಗೇಟು ನೀಡಲು ಮುಂದಾಗಿದ್ದಾರೆ.
ಪ್ರಧಾನಿ ಮೋದಿ ಅವರು ನವೆಂಬರ್ 27ರಿಂದ 29ರ ವರೆಗೆ ಗುಜರಾತ್ ಪ್ರವಾಸ ಮಾಡುತ್ತಿದ್ದು, ಈ ವೇಳೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಎಂಟು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿಯ ಮನ್ ಕಿ ಬಾತ್ ಕಾರ್ಯಕ್ರಮದೊಂದಿಗೆ ಜನರನ್ನು ಸಂಪರ್ಕಿಸಲು ಮನ್ ಕಿ ಬಾತ್, ಚಾಯ್ ಕೆ ಸಾತ್ ಎಂಬ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಗುಜರಾತ್ ಬಿಜೆಪಿ ಉಸ್ತುವಾರಿ ಭುಪೇಂದ್ರ ಯಾದವ್ ಅವರು ಹೇಳಿದ್ದಾರೆ.
ನವೆಂಬರ್ 26ರಂದು ಬೆಳಗ್ಗೆ ರಾಜ್ಯದ ಬೂತ್ ಗಳಲ್ಲಿ ಮನ್ ಕಿ ಬಾತ್, ಚಾಯ್ ಕೆ ಸಾಥ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮನದ ಮಾತುಗಳನ್ನು ಆಲಿಸಲಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಟ್ರೋಲ್ ಮಾಡಿದ ಯುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿದ ಯಾದವ್ ಅವರು, ಪ್ರತಿಪಕ್ಷ ಯಾವಾಗಲು ಸಾಮಾನ್ಯರ ಬಲವನ್ನು ಕುಗ್ಗಿಸುತ್ತದೆ. ಆದರೆ ನಮ್ಮ ಪ್ರಧಾನಿ ಜಾಗತಿಕ ಮನ್ನಣೆ ಗಳಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಾಮಾನ್ಯನ ಶಕ್ತಿ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನಿನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ತೆರೆಸಾ ಮೇ ಮತ್ತು ನರೇಂದ್ರ ಮೋದಿ ಮಾತನಾಡಿಕೊಂಡು ನಿಂತಿರುವ ಫೋಟೊವೊಂದನ್ನು ಬಳಸಿ ಕಾಂಗ್ರೆಸ್ ಟ್ರೋಲ್ ಮಾಡಿತ್ತು. 'ನನ್ನ ಬಗ್ಗೆ ವಿಪಕ್ಷಗಳು ಯಾವ ರೀತಿ ಮೆಮೆ ಮಾಡುತ್ತಿವೆ ಎಂದು ನೀವು ನೋಡಿದ್ದೀರಾ?' ಎಂದು ಮೋದಿ ಕೇಳುತ್ತಾರೆ. ಅದಕ್ಕೆ ಟ್ರಂಪ್,'ಅದನ್ನು ಮೆಮೆ ಅಲ್ಲ ಮೀಮ್ ಅಂತ ಹೇಳ್ತಾರೆ' ಎಂದಾಗ ತೆರೆಸಾ ಮೇ 'ನೀನು ಚಹಾ ಮಾರು' ಎಂಬ ಉತ್ತರ ನೀಡುತ್ತಾರೆ ಎಂದು ಟ್ರೋಲ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.