ಹೈದರಾಬಾದ್: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, 85 ವರ್ಷದ ವೃದ್ದನ ಬಂಧನ
85 ವರ್ಷದ ವೃದ್ಧನೊಬ್ಬ 6 ಮಂದಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದಾನೆ! ಹೈದರಾಬಾದ್ ನಲ್ಲಿ ವಾಸವಿರುವ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ .......

Published On :
ಹೈದರಾಬಾದ್: 85 ವರ್ಷದ ವೃದ್ಧನೊಬ್ಬ 6 ಮಂದಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದಾನೆ! ಹೈದರಾಬಾದ್ ನಲ್ಲಿ ವಾಸವಿರುವ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಸತ್ಯನಾರಾಯಣ ಈ ಆರೋಪಿಯಾಗಿದ್ದು ಬಾಲಕಿಯರಿಗೆ ಚಾಕಲೇಟ್ ನೀಡಿ ಅವರನ್ನು ಮನೆಗೆ ಕರೆತಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈತ ಕಳೆದ ಕೆಲ ತಿಂಗಳಿನಿಂದಲೂ ಈ ಕೃತ್ಯ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದು ಇದೀಗ ಆರು ಬಾಲಕಿಯರು ನೀಡೀದ ದೂರಿನ ಅನುಸಾರ ಕುಶಾಯಿ ಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರು ಜನ ಬಾಲಕಿಯರಲ್ಲಿ ನಾಲ್ವರ ಮೇಲೆ ಅತ್ಯಾಚಾರ ನಡೆದಿರುವುದು ಖಚಿತಪಟ್ಟಿದ್ದು ಇನ್ನಿಬ್ಬರ ಮೇಲೆ ಸಹ ಅತ್ಯಾಚಾರ ನಡೆಸಲು ಯುತ್ನಿಸಿದ್ದಾನೆ.
ಅತ್ಯಾಚಾರ ಪ್ರಕರಣ ಸಹಿತ ಪೋಕ್‌ಸೋ ಕಾಯಿದೆ ಅಡಿಯಲ್ಲಿ ವಿವಿಧ ಪ್ರಕರಣದಡಿಯಲ್ಲಿ ದೂರು ದಾಖಲಿಸಿರುವ ಪೋಲೀಸರು ವೃದ್ದನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hyderabadಹೈದರಾಬಾದ್child sexual abuseಬಾಲಕಿಯರುminor girlsKushaiguda policeಮಕ್ಕಳ ಲೈಂಗಿಕ ದುರುಪಯೋಗಕುಶಾಯಿ ಗುಡ ಪೊಲೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


