ಗುಜರಾತ್ ಚುನಾವಣೆ: ಕಾಂಗ್ರೆಸ್ ಗೆ ಬೆಂಬಲ ನೀಡಿದ ಹಾರ್ದಿಕ್ ಪಟೇಲ್ ಗೆ ಕಪಿಲ್ ಸಿಬಲ್ ಧನ್ಯವಾದ
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲವನ್ನು ಘೋಷಿಸಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಧನ್ಯವಾದ ಹೇಳಿದ್ದಾರೆ.

Published On :
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲವನ್ನು ಘೋಷಿಸಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಧನ್ಯವಾದ ಹೇಳಿದ್ದಾರೆ. ಅವರ ಒಗ್ಗಟ್ಟಿನ ಹೋರಾಟವು ಬಿಜೆಪಿಯನ್ನು ಹಿಮ್ಮೆಟ್ಟಿಸಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಪಟೇಲ್ ನೇತೃತ್ವದ ಪಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್)ಿಬ್ಬರೂ ಒಟ್ಟಾಆಗಿಯೇ ಕೆಲಸ ಮಾಡುತ್ತೇವೆ. ಇಬ್ಬರೂ ಸಹ ಮೀಸಲಾತಿ ಕೋಟಾಗಾಗಿ ಬೇಡಿಕೆ ಇಡುತ್ತೇವೆ.ಈ ಸಂಬಂಧ ಮುಂದಿನ ನಿಲುವುಗಳೇನೆನ್ನುವುದನ್ನು ಭವಿಷಯದಲ್ಲಿ ನಿರ್ಧರಿಸಲಾಗುತ್ತದೆ. ಗುಜರಾತ್ ಚುನಾವಣೆಯಲ್ಲಿ ಗೆಲುವು ಅಗತ್ಯವಾಗಿದೆ, ಇದಕ್ಕಾಗಿ ರಾಜ್ಯದ ಜನರಿಗೆ ನಿಡುವ ಭರವಸೆಗಳನ್ನು ಪೂರ್ಣಗೊಳಿಸಬೇಕು. ಮಾಜಿ ಕೇಂದ್ರ ಸಚಿವ ಸಿಬಲ್ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಪಿಎ ಎ ಎಸ್ ಜತೆಗೆ ಸಭೆ ನಡೆಸಿದ ಸಮಯದಲ್ಲಿ ಸಹ ಕಪಿಲ್ ಸಿಬಲ್ ತಾವು ಬಿಜೆಪಿಯವರ ಕಾರ್ಯಕ್ರಮಗಳನ್ನು ಟೀಕಿಸಿದರು. "ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಬಿಜೆಪಿ ಪಟೇಲ್ ಸಮುದಾಯದ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಇದೀಗ ಸಂಘಟನೆ ಬಿಜೆಪಿ ವಿರುದ್ಧ ಹೋರಾಡುತ್ತಿರುವುದಕ್ಕೆ ನಮಗೆ ಸಂತಸವಿದೆ.ಅವರು ಒಂದು ಸಿದ್ದಾಂತವನ್ನಿಟ್ಟುಕೊಂಡು ನಮ್ಮೊಂದಿಗೆ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ." ಸಿಬಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿKapil Sibalಕಪಿಲ್ ಸಿಬಲ್Hardik Patelಗುಜರಾತ್ ವಿಧಾನಸಭೆ ಚುನಾವಣೆGujarat assembly pollsPatidar Anamat Andolan Samiti (PAAS)ಹಾರ್ಡಿಕ್ ಪಟೇಲ್ಪಟೇದಾರ್ ಅನಾಮತ್ ಆಂದೋಲನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


