ಮೋದಿ ಸರ್ಕಾರದ ಆಡಳಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿದ ಶಿವಸೇನೆ
ಶಿವಸೇನಾ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಮೋದಿ ಆಡಲಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿ ಸಂಪಾದಕೀಯ ಲೇಖನವನ್ನು ಪ್ರಕಟಿಸಿದೆ.

Published On :
ಮುಂಬೈ: ಶಿವಸೇನಾ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಮೋದಿ ಆಡಳಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿ ಸಂಪಾದಕೀಯ ಲೇಖನವನ್ನು ಪ್ರಕಟಿಸಿದೆ. ಅದರಲ್ಲಿ ಈ ಎರಡೂ ಸರ್ಕಾರಗಳು ತಮ್ಮ ಆಳ್ವಿಕೆಗೆ ದೇವರ ಆಶೀರ್ವಾದವಿದೆ ಎಂದು ನಂಬಿದ್ದವು. ಅವರನ್ನು ಹಿಂಬಾಲಿಸುವ ಕುರುಡು ಅನುಯಾಯಿಗಳನ್ನು ಹೊಂದಿದ್ದರೆಂದು ಅದರಲ್ಲಿ ಬರೆಯಲಾಗಿದೆ.
ದೇಶದಲ್ಲಿ ಏನೇ ಒಳ್ಳೆಯ ಬೆಳವಣಿಗೆಗಳು ನಡೆದಲ್ಲಿ ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಅದನ್ನು ಹೊಗಳುತ್ತವೆ. ಹಾದರೆ ಅದೇ ಯಾವ ಕೆಟ್ಟ ಘಟನೆಗಳಾದಲ್ಲಿ ಅಂತಹಾ ಘಟನೆಗಳ ಹೊಣೆಗಾರಿಕೆಯನ್ನು ಹೊರಲು ನಿರಾಕರಿಸುತ್ತವೆ. "ಬ್ರಿಟಿಷ್ ಆಳ್ವಿಕೆಯಲ್ಲಿ, ಇಂಗ್ಲಿಷ್ ಆಳ್ವಿಕೆಯು ದೇವರ ಆಶೀರ್ವಾದ ಎಂದು ಹೇಳುವ ಜನರಿದ್ದರು ಅದೇ ರೀತಿ, ಪ್ರಧಾನಿ ಮೋದಿ ಅವರ ಬಗ್ಗೆ ಸಹ ಹೇಳುವ ಜನರನ್ನು ನಾವು ನೊಡುತ್ತೇವೆ. ಒಳ್ಳೆಯ ಮಳೆಯಾದಲ್ಲಿ ಅದು ಮೋದಿ ಸರ್ಕಾರದಿಂದ ಆಗಿದೆ ಎನ್ನುವ ಯಾರೂ ಮಳೆ, ಪ್ರವಾಹದಿಂದ ಯಾವುದೇ ಬೆಳೆ ನಷ್ಟವಾದರೆ ಮೋದಿಯನ್ನು ದೂರುವುದಿಲ್ಲ." ಎಂದು ಸಾಮ್ನಾ ವರದಿ ತಿಳಿಸಿದೆ.
ದೇಶದಾದ್ಯಂತ ಸಂಭವಿಸಿದ ರೈಲು ದುರಂತಗಳ ಬಗೆಗೆ ಹೇಳುತ್ತಾ, "ಬುಉಲೆಟ್ ರೈಲು ಮೋದಿ ಸರ್ಕಾರದ ಕನಸು, ಆದರೆ ರೈಲು ದುರಂತಗಳಲ್ಲ! ಇದರ ಬಗೆಗೆ ಮೋದಿ, ಅವರ ಹಿಂಬಾಲಕರಾರೂ ಒಂದು ಮಾತನ್ನೂ ಆಡುವುದಿಲ್ಲ. ವ್ಯವಹಾರಸ್ಥ ಅಥವಾ ಉದ್ಯಮಿಯೊಬ್ಬ ದೇಶವನ್ನಾಳುವುದು ಸರಿಯಾದ ಕ್ರಮವಲ್ಲ. "ಮೋದಿ ಅವರ ಆಳ್ವಿಕೆಯು ದೇವರ ಆಶೀರ್ವಾದ ಎಂದು ಭಾವಿಸುವ ಜನರು ಸರ್ವಶಕ್ತನಿಗೆ ಅಗೌರವ ತೋರುತ್ತಿದ್ದಾರೆ, ಆದರೆ ಆತನೇ ಸಾಮಾನ್ಯ ಪ್ರಜಾಪ್ರಭುತ್ವದ ದೇವರು" ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


