ತಾಯಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾದ ಕಾಶ್ಮೀರ ಫುಟ್ಬಾಲಿಗ!
ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಕೊನೆಗೂ ತನ್ನ ತಾಯಿಯ ಕಣ್ಣೀರಿಗೆ ಸೋತು ಇದೀಗ ಜಮ್ಮು ಕಾಶ್ಮೀರ ಭದ್ರತಾ ಪಡೆಗೆ ಶರಣಾಗಿದ್ದಾನೆ.

Published On :
ಶ್ರೀನಗರ: ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಕೊನೆಗೂ ತನ್ನ ತಾಯಿಯ ಕಣ್ಣೀರಿಗೆ ಸೋತು ಇದೀಗ ಜಮ್ಮು ಕಾಶ್ಮೀರ ಭದ್ರತಾ ಪಡೆಗೆ ಶರಣಾಗಿದ್ದಾನೆ.
ಮೂಲಗಳ ಪ್ರಕಾರ ಮಜೀದ್ ಇರ್ಶಾದ್ ಖಾನ್ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಗುರುವಾರ ರಾತ್ರಿ 10.30ಕ್ಕೆ ಖಾನ್ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಅನಂತನಾಗ್ ನಲ್ಲಿ ಸೇನೆಯ ಗುಂಡಿಗೆ ಬಲಿಯಾದ ತನ್ನ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಮಜೀದ್ ಇರ್ಶಾದ್ ಖಾನ್ ಎಲ್ಇಟಿಗೆ ಸೇರುವ ನಿರ್ಧಾರ ತೆಗೆದುಕೊಂಡಿದ್ದ ಎನ್ನಲಾಗಿದೆ. ಅಂತೆಯೇ ಎಲ್ಇಟಿ ಸಂಘಟನೆ ಸೇರುವುದಾಗಿ ಅಕ್ಟೋಬರ್ 29ರಂದು ಫೇಸ್ ಬುಕ್ ಮೂಲಕ ಸೂಚನೆ ನೀಡಿದ್ದ.
ಖಾನ್ ನಾಪತ್ತೆ ಬಳಿಕ ಆತನ ತಾಯಿ ಆಳಿಯಾ ಬೇಗಂ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದರಂತೆ. ಬಳಿಕ ಆತ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದು ಕಣ್ಣೀರು ಹಾಕಿದ್ದರಂತೆ. ಈ ವಿಡಿಯೋ ಕಾಶ್ಮೀರದಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ನೋಡಿದ ಮಜೀದ್ ಇರ್ಶಾದ್ ಖಾನ್ ಕೊನೆಗೂ ತಾಯಿ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತನಾಗ್ ಹಿರಿಯ ಪೊಲೀಸ್ ಅಧೀಕ್ಷಕ ಅಲ್ತಾಫ್ ಅಹಮದ್ ಅವರು, ಆತ ಮರಳಿ ಬರಲು ಬೇಕಾಗುವ ಎಲ್ಲಾ ಸಹಾಯ ಮಾಡಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶ್ರೀನಗರSrinagarಜಮ್ಮು ಮತ್ತು ಕಾಶ್ಮೀರJammu and KashmirViral Newsವೈರಲ್ ಸುದ್ದಿKashmir Footballerಕಾಶ್ಮೀರ ಫುಟ್ಬಾಲಿಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


