ದೇಶ

ಪೋರ್ನ್ ಹುಡುಕಿದರೆ, ಭಕ್ತಿಗೀತೆ ಸಿಗುತ್ತೆ: ಇದು ಬಿಹೆಚ್ ಯು ಪ್ರೊಫೆಸರ್ ಆ್ಯಪ್ ಮಹಿಮೆ!

ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ

ಪೋರ್ನ್ ಹುಡುಕಿದರೆ, ಭಕ್ತಿಗೀತೆ ಸಿಗುತ್ತೆ: ಇದು ಬಿಹೆಚ್ ಯು ಪ್ರೊಫೆಸರ್ ಆ್ಯಪ್ ಮಹಿಮೆ!
ಪೋರ್ನ್ ವಿಡಿಯೋ ಹುಡುಕಿದರೆ, ಭಕ್ತಿಗೀತೆ ಪ್ರಸಾರ: ಇದು ಬಿಹೆಚ್ ಯು ಪ್ರೊಫೆಸರ್ ಅಭಿವೃದ್ಧಿಪಡಿಸಿರುವ ಆ್ಯಪ್ ನ ಮಹಿಮೆ!
Published On :
ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ ಭಕ್ತಿಗೀತೆ ಸಿಗುವಂತಹ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. 
ಬಿಹೆಚ್ ಯು ನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವಿಭಾಗದ ಫೊಫೆಸರ್ ಆಗಿರುವ ನರಶಾಸ್ತ್ರಜ್ಞ ಡಾ.ವಿಜಯ್ ನಾಥ್ ಮಿಶ್ರಾ ಹರ್ ಹರ್ ಮಹದೇವ್ ಎಂಬ ಆಪ್ ನ್ನು ಅಭಿವೃದ್ಧಿಪಡಿಸಿದ್ದು, ಪೋರ್ನೋಗ್ರಫಿ ಇರುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುತ್ತದೆ. 
ಬಳಕೆದಾರರು ಪೋರ್ನ್ ವೆಬ್ ಸೈಟ್ ಗಳಿಗಾಗಿ ಹುಡುಕಿದರೆ ಪೋರ್ನ್ ವೆಬ್ ಸೈಟ್ ಗಳು ತೆರೆದುಕೊಳ್ಳುವುದರ ಬದಲು ಭಕ್ತಿಗೀತೆಗಳು ಪ್ರಸಾರವಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಡಾ.ವಿಜಯ್ ನಾಥ್ ಮಿಶ್ರಾ ಹೇಳಿದ್ದಾರೆ. 
ಇಂಟರ್ ನೆಟ್ ನಲ್ಲಿ ಪೋರ್ನ್ ಸುಲಭವಾಗಿ ಸಿಗುವುದರಿಂದ ಮನುಷ್ಯರ ಮನಸು ಹಿಂಸಾಚಾರ, ಅಶ್ಲೀಲತೆಯತ್ತ ತಿರುಗುತ್ತದೆ. ಇದನ್ನು ತಪ್ಪಿಸಲು ಆಪ್ ನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಮಿಶ್ರಾ ಹೇಳಿದ್ದಾರೆ. ಆಪ್ ಪ್ರಾರಂಭದ ಹಂತದಲ್ಲಿದ್ದು, ಈಗ ಹಿಂದೂ ಭಕ್ತಿಗೀತೆಗಳಷ್ಟೇ ಇದೆ. ಮುಂದಿನ ದಿನಗಳಲ್ಲಿ ಇತರ ಧರ್ಮಗಳ ಭಕ್ತಿಗೀತೆಗಳನ್ನೂ ಸೇರಿಸಲಾಗುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ. ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಲಾಗಿರುವ ಆಪ್ ನ್ನು ಈ ವರೆಗೂ 238 ಜನರು ಡೌನ್ ಲೋಡ್ ಮಾಡಿದ್ದಾರೆ. ಒಟ್ಟು 3,000 ಆಕ್ಷೇಪಾರ್ಹ ವೆಬ್ ಸೈಟ್ ಗಳನ್ನು ಗುರುತಿಸಿದೆ ಎಂದು ಡಾ. ಮಿಶ್ರಾ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.