ದೇಶ

ಕಾನ್ಪುರ: ಕಾಮುಕರ ಗುಂಪಿನಿಂದ ಅತ್ಯಾಚಾರಕ್ಕೆ ಯತ್ನ, ಚಲಿಸುತ್ತಿದ್ದ ರೈಲಿನಿಂದ ಜಿಗಿದ ತಾಯಿ-ಮಗಳು

ಮಗಳ ಮೇಲೆ ಅತ್ಯಾಚಾರ ಪ್ರಯತ್ನ ನಡೆಯುತ್ತಿರುವುದನ್ನು ಕಂಡ ತಾಯಿ ತನ್ನ ಮಗಳೊಡನೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪಾರಾದ ಘಟನೆ ಇಂದು ಕಾನ್ಪುರ ಸಮೀಪ ನಡೆದಿದೆ.

ಕಾನ್ಪುರ: ಕಾಮುಕರ ಗುಂಪಿನಿಂದ ಅತ್ಯಾಚಾರಕ್ಕೆ ಯತ್ನ, ಚಲಿಸುತ್ತಿದ್ದ ರೈಲಿನಿಂದ ಜಿಗಿದ ತಾಯಿ-ಮಗಳು
ಸಾಂದರ್ಭಿಕ ಚಿತ್ರ
Published On :
ಕಾನ್ಪುರ: ಮಗಳ ಮೇಲೆ ಅತ್ಯಾಚಾರ ಪ್ರಯತ್ನ ನಡೆಯುತ್ತಿರುವುದನ್ನು ಕಂಡ ತಾಯಿ ತನ್ನ ಮಗಳೊಡನೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪಾರಾದ ಘಟನೆ ಇಂದು ಕಾನ್ಪುರ ಸಮೀಪ ನಡೆದಿದೆ. 
ಕೋಲ್ಕತ್ತಾದಿಂದ ದೆಹಲಿಗೆ ಹೊರಟಿದ್ದ ಹೌರಾ-ಜೋಧ್ ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಬವಿಸಿದ್ದು ರೈಲಿನಲ್ಲಿದ್ದ ಒಂದು ಕಾಮುಕರ ಗುಂಪು 15 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದ ತಾಯಿ  ಮಗಳನ್ನೂ ಕರೆದುಕೊಂಡು ರೈಲಿನಿಂದ ಹೊರ ಜಿಗಿದಿದ್ದಾರೆ. ಚಂದಾರಿ ಹಾಗೂ ಕಾನ್ಪುರ ರೈಲು ನಿಲ್ದಾಣದ ಮಧ್ಯ ಜಾಗದಲ್ಲಿ  ರೈಲು ಚಲಿಸುತ್ತಿದ್ದ ವೇಳೆ ಮಗಳನ್ನು ರೈಲಿನ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರಾಕ್ಕೆ ಯತ್ನ ನಡೆಸಿದ ಗುಂಪನ್ನು ಗಮನಿಸಿದ 40 ವರ್ಷದ ತಾಯಿ ಮಗಳೊಡನೆ ರೈಲಿನಿಂದ ಹೊರಕ್ಕೆ ಜಿಗಿದಿದ್ದಾರೆ.
ಆ ಬಳಿಕ ಇಬ್ಬರೂ ಪ್ರಜ್ಞಾಹೀನ ರಾಗಿದ್ದು ಸುಮಾರು ಎರಡು ಗಂಟೆಗಳ ನಂತರ ಚಂದಾರಿ ರೈಲ್ವೆ ನಿಲ್ದಾಣ ತಲುಪಿದ್ದರು. ಅಲ್ಲಿಂದ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದ ಅವರನ್ನು ಚಿಕಿತ್ಸೆಗಾಗಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಪತಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ಮಗಳು ಕೋಲ್ಕತ್ತಾದಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದಳು.  ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ರೈಲ್ವೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.