ಸುಪ್ರೀಂ ಕೋರ್ಟ್ ತೀರ್ಪನ್ನೂ ಲೆಕ್ಕಿಸದೇ ಪತ್ನಿಗೆ ತಲಾಖ್ ನೀಡಿದ ಅಲೀಘರ್ ಮುಸ್ಲಿಂ ವಿವಿ ಪ್ರೊಫೆಸರ್!
ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ 2 ತಿಂಗಳ ಹಿಂದೆ ತೀರ್ಪು ನೀಡಿತ್ತಾದರೂ ಈ ತೀರ್ಪನ್ನು ಲೆಕ್ಕಿಸದೇ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರೊಫೆಸರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾರೆ.

Published On :
ಆಗ್ರಾ: ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ 2 ತಿಂಗಳ ಹಿಂದೆ ತೀರ್ಪು ನೀಡಿತ್ತಾದರೂ ಈ ತೀರ್ಪನ್ನು ಲೆಕ್ಕಿಸದೇ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರೊಫೆಸರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾರೆ.
ಪ್ರೊಫೆಸರ್ ಖಾಲೀದ್ ಬಿನ್ ಯೂಸೂಫ್ ಖಾನ್ ತನ್ನ ಪತ್ನಿಗೆ ವಾಟ್ಸ್ ಆಪ್ ನಲ್ಲಿ ತಲಾಖ್ ನೀಡಿರುವ ವ್ಯಕ್ತಿಯಾಗಿದ್ದಾರೆ. ಪತಿ ತಲಾಖ್ ನೀಡಿರುವುದನ್ನು ವಿರೋಧಿಸಿರುವ ಪತ್ನಿ, ತನಗೆ ನ್ಯಾಯ ಸಿಗದೇ ಇದ್ದರೆ ವಿಶ್ವವಿದ್ಯಾನಿಲಯದ ಉಪಕುಲಪತಿ ನಿವಾಸದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಯಸ್ಮೀನ್ ಖಾಲೀದ್ ತಲಾಖ್ ನ ಸಂತ್ರಸ್ತೆಯಾಗಿದ್ದು, ಮೊದಲು ವಾಟ್ಸ್ ಆಪ್ ನಲ್ಲಿ ತಲಾಖ್ ನೀಡಿದ್ದಾರೆ. ನಂತರ ಟೆಕ್ಸ್ಟ್ ಮೆಸೇಜ್ ಮೂಲಕ ತಲಾಖ್ ನೀಡಿದ್ದಾರೆ. ಈಗ ತಮಗೆ ಹಾಗೂ ತಮ್ಮ ಮಕ್ಕಳಿಗೆ ಅನ್ಯಾಯವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿದ್ದಾರೆ. ಒಂದು ವೇಳೆ ತಮಗೆ ನ್ಯಾಯ ಸಿಗದೇ ಹೋದಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ತರೀಖ್ ಮನ್ಸೂರ್ ಅವರ ನಿವಾಸದ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಖಾನ್, ಕೇವಲ ವಾಟ್ಸ್ ಆಪ್, ಟೆಕ್ಸ್ಟ್ ಮೆಸೇಜ್ ನಲ್ಲಿ ತಲಾಖ್ ನೀಡಿರುವುದಷ್ಟೇ ಅಲ್ಲದೇ ಶರಿಯಾ ಪ್ರಕಾರ ಮತ್ತೂ ಒಂದು ತಲಾಖ್ ನೀಡುವುದಾಗಿ ಇಬ್ಬರ ಸಮ್ಮುಖದಲ್ಲಿ ಹೇಳಿರುವುದಾಗಿ ಖಾನ್ ತಿಳಿಸಿದ್ದಾರೆ. ಪ್ರಕರಣದಲ್ಲಿ ತಾವೇ ಬಲಿಪಶು ಎಂದು ಹೇಳಿಕೊಂಡಿರುವ ಖಾನ್ ನಮ್ಮ ವಿವಾಹಕ್ಕೂ ಮುನ್ನ ಆಕೆ ತಾನು ಪದವೀಧರೆ ಎಂದು ನನಗೆ ಸುಳ್ಳು ಮಾಹಿತಿ ನೀಡಿದ್ದಾಳೆ, ಆದ್ದರಿಂದ ಆಕೆಗೆ ಮೂರನೆ ತಲಾಖ್ ನ್ನೂ ನೀಡುತ್ತೇನೆ, ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್Triple Talaqತ್ರಿವಳಿ ತಲಾಖ್Aligarh Muslim University professorಅಲೀಘರ್ ಮುಸ್ಲಿಂ ವಿವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


