ದೇಶ

ಹಿಮಾಚಲ ಪ್ರದೇಶ: ವಿಧಾನಸಭೆ ಚುನಾವಣೆಗೆ ಮತದಾನ ಆರಂಭ

ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, 68 ಕ್ಷೇತ್ರಗಳಿಗೆ 338 ಅಭ್ಯರ್ಥಿಗಳು....

ಹಿಮಾಚಲ ಪ್ರದೇಶ: ವಿಧಾನಸಭೆ ಚುನಾವಣೆಗೆ ಮತದಾನ ಆರಂಭ
ಭಾರತೀಯ ಜನತಾ ಪಾರ್ಟಿಯ ಪ್ರೇಮ್ ಕುಮಾರ್ ದುಮ್ಹಲ್ ಮತ್ತು ಮುಖ್ಯಮಂತ್ರಿ ವೀರಭದ್ರ ಸಿಂಗ್
Published On :
ಹಿಮಾಚಲ ಪ್ರದೇಶ: ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, 68 ಕ್ಷೇತ್ರಗಳಿಗೆ 338 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ವೀರಭದ್ರ ಸಿಂಗ್ ಮತ್ತು ಭಾರತೀಯ ಜನತಾ ಪಾರ್ಟಿಯಿಂದ ಪ್ರೇಮ್ ಕುಮಾರ್ ದುಮಾಲ್ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದು, ಇಬ್ಬರ ಮಧ್ಯೆ ನೇರ ಹಣಾಹಣಿಯಿದೆ.
ವೀರಭದ್ರ ಸಿಂಗ್ ಈಗಿನ ಮುಖ್ಯಮಂತ್ರಿಯಾಗಿದ್ದು ಈ ಮುಂಚೆ ಎರಡು ಬಾರಿ ದುಮಲ್ ಮುಖ್ಯಮಂತ್ರಿಯಾಗಿದ್ದರು. ಇವರಿಬ್ಬರೂ ಈ ಬಾರಿ ತಮ್ಮ ಕ್ಷೇತ್ರವನ್ನು ಬದಲಾಯಿಸಿದ್ದು ವೀರಭದ್ರ ಸಿಂಗ್ ಆಕ್ರಿ ಮತ್ತು ದುಮಲ್ ಸುಜನ್ ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಾ ಕಣಕ್ಕಿಳಿದಿದ್ದಾರೆ.
ವೃದ್ಧರು, ವಯಸ್ಕರು ಸೇರಿದಂತೆ ಮತದಾರರು ಉತ್ಸಾಹದಿಂದ ಬೆಳಗ್ಗೆಯಿಂದಲೇ ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನದ ವೇಳೆ ಯಾವುದೇ ಘರ್ಷಣೆ ಮತ್ತು ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 11,500 ಪೊಲೀಸ್ ಯೋಧರನ್ನು, 6,400 ಮಂದಿ ಗೃಹ ರಕ್ಷಕರನ್ನು, 65 ಪಾರಾ ಮಿಲಿಟರಿ ತುಕಡಿಗಳನ್ನು ರಾಜ್ಯದಾದ್ಯಂತ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗಿದೆ. 
Story image
ವೃದ್ದೆಯೊಬ್ಬರು ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿರುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.