ದೇಶ

ಪ್ರದ್ಯುಮನ್ ಹತ್ಯೆ ಪ್ರಕರಣ: 3 ದಿನಗಳ ಸಿಬಿಐ ವಶಕ್ಕೆ ಆರೋಪಿ ಬಾಲಕ

ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ ಹತ್ಯೆ ಪ್ರಕರಣದ ಆರೋಪಿ ಪ್ರಥಮ ಪಿಯು ವಿದ್ಯಾರ್ಥಿಯನ್ನು 3 ದಿನಗಳ ಸಿಬಿಐ ವಶಕ್ಕೆ ನೀಡಿ ಬಾಲಾಪರಾಧಿ ನ್ಯಾಯ ಮಂಡಳಿ

ಪ್ರದ್ಯುಮನ್ ಹತ್ಯೆ ಪ್ರಕರಣ: 3 ದಿನಗಳ ಸಿಬಿಐ ವಶಕ್ಕೆ ಆರೋಪಿ ಬಾಲಕ
ಪ್ರದ್ಯುಮನ್ ಹತ್ಯೆ ಪ್ರಕರಣ: 3 ದಿನಗಳ ಸಿಬಿಐ ವಶಕ್ಕೆ ಆರೋಪಿ ಬಾಲಕ
Published On :
ನವದೆಹಲಿ: ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ ಹತ್ಯೆ ಪ್ರಕರಣದ ಆರೋಪಿ ಪ್ರಥಮ ಪಿಯು ವಿದ್ಯಾರ್ಥಿಯನ್ನು 3 ದಿನಗಳ ಸಿಬಿಐ ವಶಕ್ಕೆ ನೀಡಿ ಬಾಲಾಪರಾಧಿ ನ್ಯಾಯ ಮಂಡಳಿ ಆದೇಶ ನೀಡಿದೆ. 
ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದ ಸಿಬಿಐ, ಆತನನ್ನು 6 ದಿನಗಳ ವಶಕ್ಕೆ ನೀಡುವಂತೆ  ಕೋರಿತ್ತು, ಅಷ್ಟೇ ಅಲ್ಲದೇ ಹತ್ಯೆ ಘೋರ ಅಪರಾಧವಾಗಿದ್ದರಿಂದ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸದೇ ವಯಸ್ಕ ಅಪರಾಧಿ ಎಂದು ಪರಿಗಣಿಸಬೇಕೆಂದು ಸಿಬಿಐ ಮನವಿ ಮಾಡಿತ್ತು. ಸಿಬಿಐ ನ ಮನವಿಯನ್ನು ಆಲಿಸಿರುವ ನ್ಯಾಯಮಂಡಳಿ ಆರೋಪಿಯನ್ನು 3 ದಿನಗಳ ವಶಕ್ಕೆ ನೀಡಿದ್ದು, ಬೆಳಿಗ್ಗೆ 10-6 ರ ವರೆಗೆ ಮಾತ್ರ ಆರೋಪಿಯ ವಿಚಾರಾಣೆ ನಡೆಸಬೇಕು ಹಾಗೂ ಆ ಬಳಿಕ ಆತನನ್ನು ಬಾಲಾಪರಾಧಿಗಳಿರುವ ಸ್ಥಳಕ್ಕೆ ಕಳಿಸಬೇಕೆಂದು ಹೇಳಿದೆ. 
ಬಂಧನಕ್ಕೂ ಮುನ್ನ 4 ಬಾರಿ ವಿಚಾರಣೆ ನಡೆಸಿದಾಗಲೂ ಆರೋಪಿ ವಿದ್ಯಾರ್ಥಿ ತಪ್ಪು ಒಪ್ಪಿಕೊಂಡಿರಲಿಲ್ಲ, ಆದರೆ ಈಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಸಿಬಿಐ ಹೇಳಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.