ದೆಹಲಿ ಎಟಿಎಂ ನಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಪತ್ತೆ!
ದೆಹಲಿಯ ಶಹೀನ್ ಬಾಗ್ ಎಟಿಎಂ ಒಂದರಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಸಿಕ್ಕಿದೆ!

Published On :
ನವದೆಹಲಿ: ದೆಹಲಿಯ ಶಹೀನ್ ಬಾಗ್ ಎಟಿಎಂ ಒಂದರಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಸಿಕ್ಕಿದೆ! ಅರ್ಧ 2 ಸಾವಿರ ರೂ. ನೋಟಿಗೆ ಇನ್ನರ್ಧ ಬಿಳಿ ಹಾಳೆಯನ್ನು ಕತ್ತರಿಸಿ ಅಂಟಿಸಿದ ಸ್ಥಿತಿಯಲ್ಲಿರುವ ನೋಟು ಮಹಮದ್ ಶಾದಾಬ್ ಎನ್ನುವವರಿಗೆ ದೊರಕಿದೆ.
ಡಿಸಿಬಿ ಬ್ಯಾಂಕ್ ಎಟಿಎಂ ನಲ್ಲಿ ಈ ನಕಲಿ ನೋಟು ಸಿಕ್ಕಿದ್ದು ಬೆಳಗ್ಗೆ 11.55ಕ್ಕೆ ಬ್ಯಾಂಕ್ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಿದ್ದ ವೇಳೆ ಶಾದಾಬ್ ಈ ನೋಟನ್ನು ಕಂಡು ಬೆಚ್ಚಿ ಬಿದ್ದರು. ತಕ್ಷಣ ಈ ವಿಷಯವನ್ನು ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ತಂದ ಶಾದಾಬ್ ಗೆ ಸರಿಯಾದ ಪ್ರತಿಕ್ರಿಯೆ ದೊರಕಲಿಲ್ಲ. ಆವರು ಈ ಕುರಿತಂತೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಸಂಗಮ್ ವಿಹಾರ್ ಮತ್ತು ಅಮರ್ ಕಾಲೋನಿ ಎಟಿಎಂ ಗಳಲ್ಲಿ ಚಿಲ್ಡ್ರೆನ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನ 2 ಸಾವಿರದ ನಕಲಿ ನೋಟು ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
half-printed noteShaheen Bagh ATM2000 rupee noteDCB Bank ATMಅರ್ಧ ನೋಟುಶಹೀನ್ ಬಾಗ್ ಎಟಿಎಂ2000 ರೂಪಾಯಿ ನೋಟುಡಿಸಿಬಿ ಬ್ಯಾಂಕ್ ಎಟಿಎಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


