ದೇಶ

ಮತ್ತೆ 48 ರೈಲುಗಳು ‘ಸೂಪರ್‌ ಫಾಸ್ಟ್‌', ಪ್ರಯಾಣ ದರ ಏರಿಕೆ

ಭಾರತೀಯ ರೈಲ್ವೆ 48 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು "ಸೂಪರ್‌ ಫಾಸ್ಟ್‌' ದರ್ಜೆಗೆ ಏರಿಸಿದ್ದು. ಅವುಗಳ ಪ್ರಯಾಣ....

ಮತ್ತೆ 48 ರೈಲುಗಳು ‘ಸೂಪರ್‌ ಫಾಸ್ಟ್‌', ಪ್ರಯಾಣ ದರ ಏರಿಕೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಭಾರತೀಯ ರೈಲ್ವೆ 48 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು "ಸೂಪರ್‌ ಫಾಸ್ಟ್‌' ದರ್ಜೆಗೆ ಏರಿಸಿದ್ದು. ಅವುಗಳ ಪ್ರಯಾಣ ದರವನ್ನು ಹೆಚ್ಚಿಸಿದೆ. 
ಈ ರೈಲುಗಳ ಈಗಿನ ಗಂಟೆಗೆ 50 ಕಿ.ಮೀ. ವೇಗವನ್ನು ಕೇವಲ ಐದು ಕಿ.ಮೀ. ಏರಿಸಿ ಅವುಗಳಿಗೆ ಸೂಪರ್‌ ಫಾಸ್ಟ್‌  ಎಂಬ ಮೇಲ್ಮಟ್ಟದ ಲೇಬಲ್‌ ಹಚ್ಚಿರುವುದು ಭಾರತೀಯ ರೈಲ್ವೆಯ ಕುಟಿಲೋಪಾಯವಾಗಿದೆ ಎಂಬ ಟೀಕೆ ಕೇಳಿಬಂದಿದೆ.
ಕಳೆದ ನವೆಂಬರ್ 1ರಂದು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸ್ಲೀಪರ್ ಕೋಚ್‌ ಪ್ರಯಾಣ ದರವನ್ನು 30 ರುಪಾಯಿ, ಸೆಕೆಂಡ್‌ ಮತ್ತು ಥರ್ಡ್ ಎಸಿ ಕೋಚ್ ಪ್ರಯಾಣ ದರವನ್ನು 45 ರುಪಾಯಿ ಹಾಗೂ ಫಸ್ಟ್‌ ಎಸಿ ಕ್ಲಾಸ್ ಪ್ರಯಾಣ ದರವನ್ನು 75 ರುಪಾಯಿ ಹೆಚ್ಚಿಸಲಾಗಿದೆ.
ಪ್ರಯಾಣ ದರ ಹೆಚ್ಚಳ ಮಾಡಲಾಗಿರುವ ಹೆಚ್ಚಿನ ರೈಲುಗಳು ಉತ್ತರ ಭಾರತದ ಕಡೆ ಚಲಿಸುವ ರೈಲುಗಳಾಗಿದ್ದು, ಅಲ್ಲಿ ಹಿಮದ ಸಮಸ್ಯೆ ಇರುವ ಕಾರಣದಿಂದಲೂ ರೈಲುಗಳು ತಡವಾಗಿಯೇ ಸಂಚರಿಸುತ್ತಿವೆ ಎನ್ನಲಾಗಿದೆ. 
ರಾಜಧಾನಿ, ತುರಂತೊ ಮತ್ತು ಶತಾಬ್ಧಿಯಂಥ ಪ್ರಮುಖ ರೈಲುಗಳೇ ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸುತ್ತಿವೆ. ಹೀಗಾಗಿ 48 ರೈಲುಗಳನ್ನು ‘ಸೂಪರ್‌ ಫಾಸ್ಟ್’ ದರ್ಜೆಗೆ ಏರಿಸಿರುವುದರಿಂದ ದರ ಹೆಚ್ಚಳದ ಅನನುಕೂಲ ಬಿಟ್ಟರೆ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.
ರೈಲ್ವೆ ಇಲಾಖೆ ಈ ದರ ಏರಿಕೆ ಮೂಲಕ ಹೆಚ್ಚುವರಿಯಾಗಿ 70 ಕೋಟಿ ರುಪಾಯಿಗಳ ಆದಾಯವನ್ನು ನಿರೀಕ್ಷಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.