ದೇಶ

2022 ರ ವೇಳೆಗೆ ಬಡತನ, ಭ್ರಷ್ಟಾಚಾರ ಮುಕ್ತ ಭಾರತ: ನೀತಿ ಆಯೋಗ

2022 ರ ವೇಳೆಗೆ ಬಡತನ, ಭ್ರಷ್ಟಾಚಾರ ಭಾರತ ನಿರ್ಮಾಣವಾಗಲಿದೆ ಎಂದು ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗ ಹೇಳಿದೆ.

2022 ರ ವೇಳೆಗೆ ಬಡತನ, ಭ್ರಷ್ಟಾಚಾರ ಮುಕ್ತ ಭಾರತ: ನೀತಿ ಆಯೋಗ
ನೀತಿ ಆಯೋಗ
Published On :
ನವದೆಹಲಿ: 2022 ರ ವೇಳೆಗೆ ಬಡತನ, ಭ್ರಷ್ಟಾಚಾರ ಭಾರತ ನಿರ್ಮಾಣವಾಗಲಿದೆ ಎಂದು ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗ ಹೇಳಿದೆ.
ಕೇವಲ ಬಡತನ, ಭ್ರಷ್ಟಾಚಾರ ಮಾತ್ರವಲ್ಲದೇ ಭಾರತ 2022 ರ ವೇಳೆಗೆ ಮಲಿನ, ಭಯೋತ್ಪಾದನೆ, ಜಾತೀಯತೆ, ಕೋಮುವಾದದಿಂದಲೂ ಸಹ ಮುಕ್ತಿ ಪಡೆಯಲಿದೆ ಎಂದು ನೀತಿ ಆಯೋಗ ಹೇಳಿದೆ. ಕಳೆದ ತಿಂಗಳು ನಡೆದ ಗೌರ್ನರ್ ಗಳ ಸಮ್ಮೇಳನದಲ್ಲಿ ಇಂಡಿಯಾ @ 2022 ಡಾಕ್ಯುಮೆಂಟ್ ನ್ನು ಮಂಡಿಸಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಈಗಿನಿಂದ 2047 ರ ವರೆಗೆ ಭಾರತದ ಆರ್ಥಿಕತೆ ಶೇ.8 ರಷ್ಟು ಪ್ರಗತಿ ಸಾಧಿಸಿದಲ್ಲಿ ವಿಶ್ವದ ಪ್ರಮುಖ 3 ಆರ್ಥಿಕತೆಗಳಲ್ಲಿ ಒಂದಾಗಿರಲಿದೆ ಎಂದು ಹೇಳಿದ್ದಾರೆ. 
2022 ರ ವೇಳೆಗೆ ಭಾರತ ಕುಪೋಷಣೆಯಿಂದಲೂ ಮುಕ್ತಿ ಪಡೆಯಲಿದೆ. 2019 ರ ವೇಳೆಗೆ ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆ(ಪಿಎಂಜಿಎಸ್ ವೈ) ಅಡಿಯಲ್ಲಿ ಸರ್ಕಾರಕ್ಕೆ ಎಲ್ಲಾ ಹವಾಮಾನ ರಸ್ತೆಗಳ ಮೂಲಕ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಿದೆ ಎಂದು ಇಂಡಿಯಾ @ 2022 ಡಾಕ್ಯುಮೆಂಟ್ ನಲ್ಲಿ ಹೇಳಲಾಗಿದೆ. 
ಇವಿಷ್ಟೇ ಅಲ್ಲದೇ 2022 ರ ವೇಳೆಗೆ ಭಾರತ ಕನಿಷ್ಠ 20 ವಿಶ್ವದರ್ಜೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.