ನಿಷೇಧಿತ ನೋಟು ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಇಲ್ಲ: ಸುಪ್ರೀಂ ಗೆ ಕೇಂದ್ರ
ನಿಷೆಧಿತ 500, 1000 ರೂಪಾಯಿ ನೋಟುಗಳನ್ನು ಕಾರಣಾಂತರಗಳಿಂದ ಬ್ಯಾಂಕ್ ನಾಲ್ಲಿ ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.

Published On :
ನವದೆಹಲಿ: ನಿಷೆಧಿತ 500, 1000 ರೂಪಾಯಿ ನೋಟುಗಳನ್ನು ಕಾರಣಾಂತರಗಳಿಂದ ಬ್ಯಾಂಕ್ ನಾಲ್ಲಿ ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.
ಹಳೆಯ 500, 1000 ನೋಟುಗಳನ್ನು ಮತ್ತೆ ಬ್ಯಾಂಕ್ ಗೆ ಜಮಾ ಮಾಡಲು ಅನುಮತಿ ಕೇಳಿ ಸಲ್ಲಿಸಲಾಗಿದ್ದ 14 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕೋರ್ಟ್, ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಪೀಠವೇ ಈ ವಿಷಯವಾಗಿಯೂ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ, ನ್ಯಾ.ಎಎಂ ಖನ್ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.
ಇನ್ನು ಹಳೆಯ ನೋಟುಗಳನ್ನು ಹೊಂದಿರುವ ಎನ್ಆರ್ ಐ ಗಳು ಹಾಗೂ ಕಾರಣಾಂತರಗಳಿಂದ ಜಮಾ ಮಾಡದವರ ವಿರುದ್ಧ ಕೇಂದ್ರ ಸರ್ಕಾರ ಕ್ರಿಮಿನಲ್ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಟಾರ್ನಿ ಜನರಲ್ ಸುಪ್ರೀಂ ಕೋಟ್ ಗೆ ಸ್ಪಷ್ಟಪಡಿಸಿದ್ದಾರೆ.
ನೋಟು ನಿಷೇಧದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ 2016 ರ ಡಿಸೆಂಬರ್ 16 ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಈಗ ಜಮಾ ಮಾಡಲು ಅನುಮತಿ ಕೇಳಿ ಸಲ್ಲಿಸಲಾಗಿದ್ದ 14 ಅರ್ಜಿಗಳ ಬಗ್ಗೆಯೂ ಸಾಂವಿಧಾನಿಕ ಪೀಠವೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


