ಹಿಂದೂ ಭಯೋತ್ಪಾದನೆ: ಕಮಲ್ ಬೆಂಬಲಕ್ಕೆ ನಿಂತ ಪ್ರಕಾಶ್ ರೈ
ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ನಟ ಕಮಲ್ ಹಾಸನ್ ಅಭಿಪ್ರಾಯವನ್ನು ನಟ ಪ್ರಕಾಶ್ ರೈ, ಬೆಂಬಲಿಸಿದ್ದಾರೆ.

Published On :
ಚೆನ್ನೈ: ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ನಟ ಕಮಲ್ ಹಾಸನ್ ಅಭಿಪ್ರಾಯವನ್ನು ನಟ ಪ್ರಕಾಶ್ ರೈ, ಬೆಂಬಲಿಸಿದ್ದಾರೆ.
ಧರ್ಮ, ಸಂಸ್ಕೃತಿ, ನೈತಿಕತೆ ಹೆಸರಿನಲ್ಲಿ ಭಯವನ್ನು ಹುಟ್ಟಿಸುವುದು ಭಯೋತ್ಪಾದನೆಯಾಗುವುದಿಲ್ಲವೇ ಹಾಗಿಲ್ಲವಾದರೆ ಅದನ್ನು ಏನೆಂದು ಪ್ರಶ್ನಿಸುತ್ತಾರೆ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
" ಸಂಬಂಧಪಟ್ಟವರಿಗೆ" ಎಂದು ಬರೆದಿರುವ ಪ್ರಕಾಶ್ ರೈ, ನನ್ನ ದೇಶದ ಯುವ ಜತನೆಯನ್ನು ನೈತಿಕತೆ ರಸ್ತೆಯಲ್ಲಿ ಥಳಿಸುವುದು ಭಯೋತ್ಪಾದನೆಯಲ್ಲವೇ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಗೋಹತ್ಯೆ ನಡೆದಿರುವ ಅನುಮಾನದಿಂದಾಗಿ ಕಾನೂನನ್ನು ಕೈಗೆತ್ತಿಕೊಂಡು ಥಳಿಸುವುದು, ಟ್ರೋಲ್ ಮಾಡಿ, ನಿಂದಿಸುವುದು, ಭಿನ್ನಾಭಿಪ್ರಾಯಗಳಿಗೆ ಬೆದರಿಕೆ ಹಾಕುವುದು ಭಯೋತ್ಪಾದನೆ ಅಲ್ಲದೇ ಇದ್ದರೆ, ಮತ್ತೇನನ್ನು ಭಯೋತ್ಪಾದನೆ ಎನ್ನಬೇಕು ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಅವರು ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರು, ಈ ಬೆನ್ನಲ್ಲೇ ಪ್ರಕಾಶ್ ರೈ ಸಹ ಭಯೋತ್ಪಾದನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


