ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದಾರೆ.

Published On :
ಕಂಗ್ರಾ: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದಾರೆ.
ಹಿಮಾಚಲಪ್ರದೇಶದ ಚುನಾವಣೆ ನಿಮಿತ್ತ ಇಂದು ಕಂಗ್ರಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಷ್ಟು ದಿನ ಹಿಮಾಚಲ ಪ್ರದೇಶವನ್ನು ಲೂಟಿ ಮಾಡಿದವರಿಗೆ ವಿದಾಯ ಹೇಳುವ ಸಮಯ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಐದು ಮಾಫಿಯಾಗಳು ಜನತೆಗೆ ಮಾರಕವಾಗಿದ್ದು, ಗಣಿಗಾರಿಕೆ ಮಾಫಿಯಾ, ಅರಣ್ಯ ಮಾಫಿಯಾ, ಡ್ರಗ್ ಮಾಫಿಯಾ, ಟೆಂಡರ್ ಮಾಫಿಯಾ ಮತ್ತು ವರ್ಗಾವಣೆ ಮಾಫಿಯಾಗಳಿಂದ ಹಿಮಾಚಲ ಪ್ರದೇಶವನ್ನು ಮುಕ್ತಗೊಳಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಸಿಎಂ ವೀರಭದ್ರಸಿಂಗ್ ನೇತೃತ್ವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದಿಲ್ಲ. ಹಿಮಾಚಲ ಪ್ರದೇಶದಾದ್ಯಂತ ನಾನು ಪ್ರವಾಸ ಮಾಡಿದ್ದು, ಇಲ್ಲಿ ಪ್ರತಿಯೊಂದು ಪ್ರದೇಶಗಳ ಹಿನ್ನಲೆ ನನಗೆ ಗೊತ್ತಿದೆ.
ದೇವರ ಪುಣ್ಯಭೂಮಿಯಲ್ಲಿ ರಾಕ್ಷಸರು ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಆಡಳಿತ ನಡೆಸುತ್ತಿರುವವರು ತಮ್ಮನ್ನು ದೇವರು ರಕ್ಷಿಸುತ್ತಾನೆ ಎಂದು ಭಾವಿಸಿದ್ದಾರೆ. ಆದರೆ ದೇವರು ಎಂದಿಗೂ ಕೆಟ್ಟವರ ಕೈ ಹಿಡಿಯುವುದಿಲ್ಲ. ಇಲ್ಲಿನ ರಾಕ್ಷಸರನ್ನು ಓಡಿಸಿ ಈ ಭೂಮಿಯನ್ನು ನಿಜಕ್ಕೂ ದೇವ ಭೂಮಿಯನ್ನಾಗಿಸಬೇಕು. ಅದು ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆದರೆ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷ ನಗೆಪಾಟಲಿನ ಕ್ಲಬ್ ಆಗಿದ್ದು, ಅದರ ಸಿಎಂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದಕ್ಕೆ ಮುಂಬರುವ ನವೆಂಬರ್ 9ರಂದು ಉತ್ತರ ದೊರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಉತ್ತರ ಪ್ರದೇಶ ಎನ್ ಟಿಪಿಸಿ ವಿದ್ಯುತ್ ಸ್ಥಾವರದ ದುರ್ಘಟನೆ ಸಂಬಂಧ ಸಂತ್ರಸ್ಥರಿದೆ ಪ್ರಧಾನಿ ಮೋದಿ ಪರಿಹಾರ ಧನ ನೀಡುವ ಕುರಿತು ನಿರ್ಧರಿಸಿದರು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಂಭೀರ ಗಾಯಾಳುಗಳಿಗೆ 50 ಸಾವಿರ ರು. ನೀಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್bjpಬಿಜೆಪಿPM Modiಪ್ರಧಾನಿ ಮೋದಿKangraHimachal Pradesh Election-2017ಕಂಗ್ರಾಹಿಮಾಚಲ ಪ್ರದೇಶ ಚುನಾವಣೆ-2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


