ವಿರೋಧಕ್ಕೆ ಮಣಿದ ಕೇಂದ್ರ: ಪ್ರಾಣಿ ವಧಾ ಪಟ್ಟಿಯಿಂದ ಎಮ್ಮೆ ಕೈಬಿಡಲು ಚಿಂತನೆ
ಮಾಂಸಕ್ಕಾಗಿ ಪ್ರಾಣಿ ವಧೆ ಕಾನೂನಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಪ್ರಾಣಿ ವಧಾ ಪಟ್ಟಿಯಿಂದ ಎಮ್ಮೆಯನ್ನು ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ಮಾಂಸಕ್ಕಾಗಿ ಪ್ರಾಣಿ ವಧೆ ಕಾನೂನಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಪ್ರಾಣಿ ವಧಾ ಪಟ್ಟಿಯಿಂದ ಎಮ್ಮೆಯನ್ನು ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಗೋಹತ್ಯೆ ಮಾರಾಟ ನಿಷೇಧದ ಬಗ್ಗೆ ಕೆಲವೆಡೆ ಪ್ರತಿಭಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮ್ಮೆಯನ್ನು ಪ್ರಾಣಿ ವಧಾ ನಿಷೇಧ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪರಿಸರ ಸಚಿವಾಲಯದ ಕಾರ್ಯದರ್ಶಿ ಎ.ಎನ್ ಜಾ ಅವರು, "ಮಾರಾಟ/ಹತ್ಯೆಗೆ ಸಂಬಂಧಿಸಿದಂತೆ ನಾವು ಹೊರಡಿಸಿರುವ ಸುತ್ತೋಲೆಗೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
"ಹೊಸ ಪಟ್ಟಿಯಲ್ಲಿ ಯಾವ್ಯಾವುದನ್ನು ಹೊರಗಿಡಬೇಕು, ಯಾವುದನ್ನು ಸೇರಿಸಬೇಕು ಎಂಬ ಬಗ್ಗೆ ಕೆಲವು ಪ್ರಸ್ತಾವಗಳು ಬಂದಿವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ' ಎಂದು ಝಾ ಹೇಳಿದ್ದಾರೆ. ಮೇ 26ರಂದು ಸಚಿವಾಲಯ ಹೊರಡಿಸಿದ್ದ ಆದೇಶದಂತೆ, ವಧೆಗೆ ನಿರ್ಬಂಧ ಹೇರಲ್ಪಟ್ಟ ಜಾನುವಾರುಗಳ ವ್ಯಾಪ್ತಿಗೆ ಗೋವು, ಗೂಳಿ, ಎಮ್ಮೆ, ಈಯುವ ಆಕಳು ಮತ್ತು ಒಂಟೆ ಸೇರಿದ್ದವು.
ಇನ್ನು ಗೋಹತ್ಯೆ ನಿಷೇಧಿಸಿ ಕೇಂದ್ರ ಹೊರಡಿಸಿರುವ ಅಧಿಸೂಚನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ಗೋಹತ್ಯೆಗೆ ಸಂಬಂಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಸಹಿತ ಹಲವು ರಾಜಕೀಯ ಮುಖಂಡರು ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರುದ್ಧ ಕಿಡಿಕಾರಿದ್ದಾರೆ. ಮದ್ರಾಸ್ ಐಐಟಿಯಲ್ಲಿ ವಿದ್ಯಾರ್ಥಿಗಳು ಬೀಫ್ ಉತ್ಸವ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


