ದೇಶ

ನರೇಂದ್ರ ಮೋದಿ ಯಾರು? ಎಂಬ ಪ್ರಶ್ನೆಗೆ ವಿದೇಶಿಗರು ನೀಡಿದ ಉತ್ತರ ಕೇಳಿದರೆ ದಂಗಾಗ್ತೀರಿ!

2014ರ ಲೋಕಸಭಾ ಚುನಾವಣೆ ಬಳಿಕ ಭಾರತ ದೇಶದ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ದಿನಕಳೆದಂತೆ ವಿಶ್ವದ ಪ್ರಭಾವಿ ನಾಯಕರುಗಳಲ್ಲಿ ಗುರುತಿಸಿಕೊಂಡಿದ್ದು, ನರೇಂದ್ರ ಮೋದಿ ಯಾರು ಎಂಬ ಪ್ರಶ್ನೆಗೆ ವಿದೇಶಿಗರು ನೀಡಿರುವ ಉತ್ತರಗಳು ನಿಜಕ್ಕೂ ದಂಗಾಗಿಸುತ್ತದೆ.

ನರೇಂದ್ರ ಮೋದಿ ಯಾರು? ಎಂಬ ಪ್ರಶ್ನೆಗೆ ವಿದೇಶಿಗರು ನೀಡಿದ ಉತ್ತರ ಕೇಳಿದರೆ ದಂಗಾಗ್ತೀರಿ!
ಯೂಟ್ಯೂಬ್ ಚಿತ್ರ
Published On :

ನವದೆಹಲಿ: 2014ರ ಲೋಕಸಭಾ ಚುನಾವಣೆ ಬಳಿಕ ಭಾರತ ದೇಶದ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ದಿನಕಳೆದಂತೆ ವಿಶ್ವದ ಪ್ರಭಾವಿ ನಾಯಕರುಗಳಲ್ಲಿ ಗುರುತಿಸಿಕೊಂಡಿದ್ದು, ನರೇಂದ್ರ ಮೋದಿ ಯಾರು  ಎಂಬ ಪ್ರಶ್ನೆಗೆ ವಿದೇಶಿಗರು ನೀಡಿರುವ ಉತ್ತರಗಳು ನಿಜಕ್ಕೂ ದಂಗಾಗಿಸುತ್ತದೆ.

ರಿಕ್ಷಾವಾಲಿ ಎಂಬ ಯೂಟ್ಯೂಬ್ ಖಾತೆದಾರರೊಬ್ಬರು ನರೇಂದ್ರ ಮೋದಿ ಅವರ ಫೋಟೋ ತೋರಿಸಿ ಮೋದಿ ಯಾರು ಎಂದು ವಿದೇಶಿಗರಲ್ಲಿ ಪ್ರಶ್ನೆ ಕೇಳಿದ್ದಾರೆ. ಪ್ರಮುಖ ಪ್ರವಾಸಿ ತಾಣದಲ್ಲಿ ವಿದೇಶಿಗರಲ್ಲಿ ಇದೇ ಪ್ರಶ್ನೆ  ಕೇಳಲಾಗಿದ್ದು, ವಿದೇಶಗರ ಉತ್ತರ ನಿಜಕ್ಕೂ ನಮ್ಮನ್ನು ದಂಗಾಗಿಸುತ್ತದೆ. ಖ್ಯಾತ ವಿಡಿಯೋ ಜಾಲತಾಣ ಯೂ ಟ್ಯೂಬ್'ನಲ್ಲಿ ತನ್ನದೇ ಛಾಪು ಮೂಡಿಸಿರುವ  'ರಿಕ್ಷಾವಾಲಿ' ಖಾತೆ ಸ್ಪೇನ್'ನ ಇಬೀಸಾ ದ್ವೀಪಕ್ಕೆ ತೆರಳಿ ಅಲ್ಲಿನ  ನಾಗರಿಕರ ಬಳಿ ಮೋದಿಯ ಚಿತ್ರ ತೋರಿಸಿ ಗುರುತಿಸಲು ಹೇಳಿದ್ದಾರೆ. ಈ ವೇಳೆ ಹಲವು ಮಂದಿ ಮೋದಿಯನ್ನು ಗುರುತಿಸುವಲ್ಲಿ ಯಸ್ವಿಯಾಗಿದ್ದಾರೆ. ಆದರೆ ನರೇಂದ್ರ ಮೋದಿ ಅವರನ್ನು ಗುರುತಿಸದ ಕೆಲ ಮಂದಿ ನೀಡಿರುವ ಉತ್ತರ  ಮಾತ್ರ ಅಚ್ಚರಿ ಪಡುವಂತೆ ಮಾಡುತ್ತದೆ.

ಕೆಲವರು ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯಂತ ಪ್ರಭಾವಿ ನಾಯಕ ಎಂದರೆ, ಮತ್ತೆ ಕೆಲವರು ಮೋದಿ ಅವರನ್ನು ಗಾಂಧಿ ಎಂದು ಗುರುತಿಸಿದ್ದಾರೆ. ಮತ್ತೊರ್ವ ಮಹಿಳೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಯೋಗ  ಗುರುಗಳು, ಪ್ರತಿನಿತ್ಯ ನಾನು ಅವರೊಂದಿಗೆ ಯೋಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಓರ್ವ ಯುವಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದೇ ಕೈಯಲ್ಲಿ ಪುಶ್ ಅಪ್ಸ್ ಮಾಡುವ ಯೋಗಗುರು ಎಂದು ಹೇಳಿದ್ದಾನೆ. ಅಂತೆಯೇ  ಮತ್ತೋರ್ವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಒಂದೇ ಕೈಯಲ್ಲಿ ಮಣ್ಣುಮುಕ್ಕಿಸುವ ಮತ್ತು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಾಕತ್ತು  ಹೊಂದಿದ್ದಾರೆ. ಆ ಮೂಲಕ ಅಮೆರಿಕವನ್ನು ಸ್ವಚ್ಛಗೊಳಿಸಲಿದ್ದಾರೆ ಎಂದು ಹೇಳಿದ್ದಾನೆ.

ಹೀಗೆ ಇನ್ನೂ ಹತ್ತು ಹಲವು ಉತ್ತರಗಳು ಲಭ್ಯವಾಗಿದ್ದು, ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕೆಲವು ನಗು ತರಿಸುವಂತಿದ್ದರೆ ಇನ್ನು ಕೆಲವು ದಂಗಾಗಿಸುತ್ತವೆ. ಒಟ್ಟಾರೆ ರಿಕ್ಷಾವಾಲಿ ಯೂಟ್ಯೂಬ್ ಖಾತೆಯ ಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈಗಾಗಲೇ ಸುಮಾರು 2, 71 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.