ಸುಖೋಯ್ -30 ವಿಮಾನ ಅವಶೇಷ ಪತ್ತೆ: ಸಿಬ್ಬಂದಿಗಾಗಿ ಮುಂದುವರಿದ ಶೋಧ ಕಾರ್ಯ
ಸುಖೊಯ್-30 ಯುದ್ಧ ವಿಮಾನದ ಕಾಣೆಯಾದ ಸಿಬ್ಬಂದಿಗಾಗಿ ಶೋಧ...

Published On :
ಇಟಾನಗರ್(ಅರುಣಾಚಲ ಪ್ರದೇಶ): ಸುಖೊಯ್-30 ಯುದ್ಧ ವಿಮಾನದ ಕಾಣೆಯಾದ ಸಿಬ್ಬಂದಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಅರುಣಾಚಲ ಪ್ರದೇಶ ಗೃಹ ಸಂಸದೀಯ ಕಾರ್ಯದರ್ಶಿ ಪಣಿ ರಾಮನ್ ತಿಳಿಸಿದ್ದಾರೆ.
ದಿನನಿತ್ಯದ ತರಬೇತಿ ಹಾರಾಟ ನಡೆಸಿದ್ದ ಸುಕೊಯ್-30 ಎಂಕೆಐ ಯುದ್ಧ ವಿಮಾನ ಕಳೆದ ಮಂಗಳವಾರ ನಾಪತ್ತೆಯಾಗಿತ್ತು. ಪೊಲೀಸ್ ಮಹಾ ನಿರ್ದೇಶಕ ಸಂದೀಪ್ ಗೋಯಲ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ವಿಮಾನದ ಅವಶೇಷ, ಬ್ಲಾಕ್ ಬಾಕ್ಸ್ ಕಳೆದ ಶುಕ್ರವಾರ ಬೆಳಗ್ಗೆ ಪತ್ತೆಹಚ್ಚಲಾಗಿದ್ದು ಸಿಬ್ಬಂದಿಗಳೇನಾಗಿದ್ದಾರೆ ಎಂದು ಇನ್ನೂ ಗೊತ್ತಾಗಿಲ್ಲ. ಇದಕ್ಕಾಗಿ ವಾಯುಪಡೆ ಸಿಬ್ಬಂದಿಯನ್ನು ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದು ಅವರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದರು.
ಯುದ್ಧ ವಿಮಾನದ ಅವಶೇಷ ಕಳೆದ ಶುಕ್ರವಾರ ಅರುಣಾಚಲ ಪ್ರದೇಶದ ತೇಜ್ ಪುರದಿಂದ 60 ಕಿಲೋ ಮೀಟರ್ ದೂರದಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


