ಪಠಾಣ್ ಕೋಟ್ ಸೇನಾ ನೆಲೆ ಬಳಿ ಸೇನಾ ಸಮವಸ್ತ್ರಗಳಿದ್ದ ಚೀಲ ಪತ್ತೆ; ಹೈ ಅಲರ್ಟ್ ಘೋಷಣೆ
ಪಂಜಾಬ್ ನ ಮಮೂನ್ ಸೇನಾ ನೆಲೆ ಬಳಿ ಶಂಕಿತ ಚೀಲವೊಂದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಪಠಾಣ್ ಕೋಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಹೈ ಅಲರ್ಟ್ ಘೋಷಿಸಲಾಗಿದೆ...

Published On :
ಪಠಾಣ್'ಕೋಟ್: ಪಂಜಾಬ್ ನ ಮಮೂನ್ ಸೇನಾ ನೆಲೆ ಬಳಿ ಶಂಕಿತ ಚೀಲವೊಂದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಪಠಾಣ್ ಕೋಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಹೈ ಅಲರ್ಟ್ ಘೋಷಿಸಲಾಗಿದೆ.
ಶಂಕಿತ ಚೀಲ ಪತ್ತೆಯಾಗುತ್ತಿದ್ದಂತೆಯೇ ಎಚ್ಚೆತ್ತ ಸೇನಾ ಪಡೆ ಕೂಡಲೇ ಕಾರ್ಯಾಚರಣೆಯನ್ನು ಆರಂಭಿಸಿದೆ. ಸ್ಥಳಕ್ಕೆ ದೌಡಾಯಿಸಿದ ಸ್ವಾಟ್ ಕಮಾಂಡೋಗಳು ಶೋಧ ಕಾರ್ಯಾಚರಣೆಯನ್ನು ಕೈಗೊಂಡವು. ಶಂಕಿತ ಚೀಲವನ್ನು ಪರಿಶೀಲಿಸಿದಾಗ ಚೀಲದಲ್ಲಿ ಸುಟ್ಟಿ ಹಾಕಿರುವ ಸೇನಾ ಸಮವಸ್ತ್ರಗಳು ದೊರಕಿದೆ ಎಂದು ಮೂಲಗಳು ತಿಳಿಸಿವೆ.
ಚೀಲದಲ್ಲಿ ಯಾವುದೇ ಬಾಂಬ್ ಆಗಲೀ ಅಥವಾ ಸ್ಫೋಟಕ ವಸ್ತುಗಳಾವುದೂ ದೊರಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ.4 ರಂದು ಮಮೂನ್ ಆರ್ಮಿ ಕಂಟೋನ್ಮೆಂಟ್ ಬೇಸ್ ಸಮೀಪ ಎರಡು ಅಪರಿಚಿತ ಚೀಲಗಳು ಪತ್ತೆಯಾದದ್ದನ್ನು ಅನುಸರಿಸಿ ಪಠಾಣ್ ಕೋಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿತ್ತು. ಶಂಕಿತ ಚೀಲಗಳಲ್ಲಿ ಎರಡು ಮೊಬೈಲ್ ಟವರ್ ಬ್ಯಾಟರಿಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
High alertPunjabಹೈ ಅಲರ್ಟ್ಪಂಜಾಬ್Pathankotಪಠಾಣ್ ಕೋಟ್Suspicious bagMamun Army base campಮಮೂನ್ ಸೇನಾ ನೆಲೆಶಂಕಿತ ಚೀಲ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


