ದೇಶ

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇಂದು ಅಪರಾಹ್ನ...

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸಿಬಿಎಸ್ ಇ  12ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಇಂದು ಅಪರಾಹ್ನ ಫಲಿತಾಂಶ ಪ್ರಕಟವಾಗಲಿದೆ ಎಂದು ಸಿಬಿಎಸ್ ಇ ಅಧಿಕೃತ ಮೂಲಗಳು ತಿಳಿಸಿವೆ. 
ವಿದ್ಯಾರ್ಥಿಗಳು ತಮ್ಮ ಅಂಕ ಮತ್ತು ಶ್ರೇಣಿಗಳನ್ನು  cbse.nic.in, cbseresults.nic.in, results.gov.in.ನಲ್ಲಿ ವೀಕ್ಷಿಸಬಹುದು. 
ಸಿಬಿಎಸ್ ಇಯ 12ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 9 ರಿಂದ ಏಪ್ರಿಲ್ 29ರವರೆಗೆ ನಡೆಸಲಾಗಿತ್ತು. ಸಿಬಿಎಸ್ಇಯ ಎಲ್ಲಾ 10 ಸ್ಥಳೀಯ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ದೆಹಲಿ ಪ್ರದೇಶದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು(2,58,321), ಪಂಚುಕುಲಾದಲ್ಲಿ 1,84,557 ಮತ್ತು ಅಜ್ಮರ್ ನಲ್ಲಿ 1,31,449 ಅಭ್ಯರ್ಥಿಗಳಿದ್ದಾರೆ. ವಿಶೇಷಚೇತನರ ವಿಭಾಗದಲ್ಲಿ ಒಟ್ಟು 2,497 ಅಭ್ಯರ್ಥಿಗಳು ಈ ವರ್ಷದ ಪರೀಕ್ಷೆಗೆ ದಾಖಲಾತಿ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.