ನನ್ನ ಕಾಲಿಗೆ ಗುಂಡು ಹೊಡೆದು, ಬಿನ್ ಲಾಡನ್ ತಲೆಗೆ ಗುಂಡು ಹಾರಿಸಿದರು: ಲಾಡೆನ್ ಪತ್ನಿ ಹೇಳಿಕೆ
ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸತ್ತು ಬರೊಬ್ಬರಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆತನ ಕಿರಿಯ ಪತ್ನಿ ಅಮಲ್ ಲಾಡೆನ್ ಕೊನೆಯ ಕ್ಷಣಗಳನ್ನು ವಿವರಿಸಿದ್ದಾರೆ.

ಲಂಡನ್: ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸತ್ತು ಬರೊಬ್ಬರಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆತನ ಕಿರಿಯ ಪತ್ನಿ ಅಮಲ್ ಲಾಡೆನ್ ಕೊನೆಯ ಕ್ಷಣಗಳನ್ನು ವಿವರಿಸಿದ್ದಾರೆ.
2011ರ ಮೇ 1ರ ರಾತ್ರಿ ಪಾಕಿಸ್ತಾನದ ಅಬೋಟಾಬಾದ್ ನಲ್ಲಿರುವ ಲಾಡೆನ್ ನಿವಾಸದ ಮೇಲೆ ದಾಳಿ ಮಾಡಿದ್ದ ಅಮೆರಿಕ ಸೇನೆಯ ನೇವಿ ಸೀಲ್ ಪಡೆ ಬಿನ್ ಲಾಡೆನ್ ನನ್ನು ಕೊಂದು ಹಾಕಿತ್ತು. ಈ ಘಟನೆ ಬಳಿಕ ಹಲವು ಬಾರಿ ಲಾಡೆನ್ ಹತ್ಯೆ ಕಾರ್ಯಾಚರಣೆ ಕುರಿತಂತೆ ಅಮೆರಿಕ ಸೇನೆ ಹಲವು ಬಾರಿ ಕಾರ್ಯಾಚರಣೆ ಕುರಿತಂತೆ ಮಾಹಿತಿ ನೀಡಿತ್ತಾದರೂ, ದಾಳಿಯ ವೇಳೆ ಮನೆಯೊಳಗಿನ ಪರಿಸ್ಥಿತಿ ಹೇಗಿತ್ತು ಎಂಬುದು ತಿಳಿದಿರಲಿಲ್ಲ. ಇದೀಗ ಲಾಡೆನ್ ನ ನಾಲ್ಕನೇ ಹಾಗೂ ಕಿರಿಯ ಪತ್ನಿ ಅಮಲ್ ಈ ಬಗ್ಗೆ ಮಾಹಿತಿ ನೀಡಿದ್ದು, ದ ಎಕ್ಸೈಲ್: ದ ಫ್ಲೈಟ್ ಆಫ್ ಒಸಾಮಾ ಬಿನ್ ಲಾಡೆನ್' ಎಂಬ ಪುಸ್ತಕದ ಲೇಖಕರಾದ ಕ್ಯಾಥಿ ಸ್ಕಾಟ್-ಕ್ಲಾಕ್ ಮತ್ತು ಆ್ಯಡ್ರಿಯನ್ ಲೆವಿಗೆ ಲಾಡೆನ್‌ನ ಕೊನೆಯ ಕ್ಷಣಗಳ ಬಗ್ಗೆ ಅಮಲ್ ಮಾಹಿತಿ ನೀಡಿದ್ದಾಳೆ.
ಆ ಪುಸ್ತಕದಲ್ಲಿ ಕೆಲ ಮಾಹಿತಿಯನ್ನು ಬ್ರಿಟನ್ ನ ಪತ್ರಿಕೆಯೊಂದು ಪ್ರಕಟಿಸಿದ್ದು, ಅದರಲ್ಲಿ ಈ ಎಲ್ಲಾ ಮಾಹಿತಿ ಇದೆ ಎಂದು ತಿಳಿದುಬಂದಿದೆ. "ಊಟ ಮುಗಿಸಿದ ಬಳಿಕ ನಾವು ಪಾತ್ರೆತೊಳೆದು ಮೇಲಿನ ಮಹಡಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಇದ್ದೆವು. ಪಕ್ಕದಲ್ಲೇ ಅವರು (ಬಿನ್ ಲಾಡೆನ್) ಮಲಗಿದ್ದರು. ಅಷ್ಟರಲ್ಲೇ ಮನೆಯ ಬಳಿ ಭಾರೀ ಸದ್ದು ಕೇಳಿಬಂತು. ಆತಂಕದಿಂದ ನಾನು ಪತಿಯನ್ನು ಎಬ್ಬಿಸಿದೆ. ಅವರು ಅಮೆರಿಕನ್ನರು ಬಂದಿದ್ದಾರೆ ಎಂದು ಭಯದಿಂದ ಕೂಗಿಕೊಂಡರು. ತಾನು ಸಿಕ್ಕಿಬಿದ್ದಿದ್ದೇನೆ ಎಂದು ಅವರಿಗೆ ಗೊತ್ತಾಗಿತ್ತು. ಅವರಿಗೆ ಬೇಕಾಗಿರುವುದು ನಾನು, ನೀವೆಲ್ಲಾ ಕೆಳಗಿನ ಮಹಡಿಗೆ ಹೋಗಿ ಎಂದು ಮೂವರು ಪತ್ನಿಯರು ಮತ್ತು ಮಕ್ಕಳಿಗೆ ಹೇಳಿದರು. ನಾನು ಮತ್ತು ನನ್ನ ಪುತ್ರ ಹುಸೇನ್ ಅವರ ಜೊತೆಗೇ ಉಳಿದುಕೊಂಡೆವು".
"ಮುಂದೆ ಕ್ಷಣಕ್ಷಣಕ್ಕೂ ಯೋಧರು ನಮ್ಮ ಸಮೀಪ ಆಗಮಿಸುತ್ತಿರುವ ಸದ್ದು ಜೋರಾಗಿ ಕೇಳಿಸತೊಡಗಿತು. ತಪ್ಪಿಸಿಕೊಳ್ಳೋಣವೆಂದರೆ ಯಾವುದೇ ಪರ್ಯಾಯ ಮಾರ್ಗ ನಮಗೆ ಉಳಿದಿರಲಿಲ್ಲ. ಲಾಡೆನ್ ರ ಒಳವಸ್ತ್ರದಲ್ಲಿ ಬಚ್ಚಿಟ್ಟಿದ್ದ ಒಂದಿಷ್ಟುಹಣ ಮತ್ತು ಕೆಲ ಉಗ್ರರ ಟೆಲಿಫೋನ್ ಸಂಖ್ಯೆ ಬಿಟ್ಟರೆ ಅವರೇನೂ ತಮ್ಮ ಬಳಿ ಇಟ್ಟುಕೊಂಡಿರಲಿಲ್ಲ. ಕೊನೆಗೆ ಯೋಧರು ನಮ್ಮ ಕೊಠಡಿಗೂ ನುಗ್ಗಿದಾಗ, ನಾನು ಅವರತ್ತ ನುಗ್ಗಿ ಅವರನ್ನು ತಡೆಯಲು ಯತ್ನಿಸಿದೆ. ಈ ವೇಳೆ ಅವರು ಹಾರಿಸಿದ ಗುಂಡು ನನ್ನ ಕಾಲಿಗೆ ತಗಲಿತು. ನಾನು ಸತ್ತಂತೆ ಸುಮ್ಮನೆ ಮಲಗಿದೆ. ಇದಾದ ಕೆಲ ಸೆಕೆಂಡ್ ಗಳಲ್ಲಿಯೇ ಯೋಧರು ಲಾಡೆನ್ ರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ತಾವು ಕೊಂದಿದ್ದು ನಿಜವಾಗಿಯೂ ಲಾಡೆನ್ ನನ್ನೇ ಎಂದು ಖಚಿತಪಡಿಸಿಕೊಳ್ಳಲು ಅವರು ಪುತ್ರಿಯರಾದ ಸುಮಯ್ಯಾ ಮತ್ತು ಮಿರಯ್ಯಾ ಅವರನ್ನು ಲಾಡೆನ್ ದೇಹದ ಬಳಿ ಹಿಡಿದು ಇದು ಯಾರು ಎಂದರು. ಇಬ್ಬರೂ, ಇದು ನಮ್ಮ ತಂದೆ ಲಾಡೆನ್ ಎಂದ ಬಳಿಕ ಅವರನ್ನು ಬದಿಗೆ ತಳ್ಳಿ ಶವಎಳೆದೊಯ್ದರು' ಎಂದು ಅಮಲ್ ಹೇಳಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


