ಎನ್ ಡಿಎ ಸರ್ಕಾರದ ಕ್ರಾಂತಿಕಾರಕ ಕ್ರಮಗಳಿಂದ ಜನರ ಬದುಕು ಸುಧಾರಣೆ: ಪ್ರಧಾನಿ ಮೋದಿ
ಎನ್ ಡಿಎ ಸರ್ಕಾರ ಕೈಗೊಂಡ ಕ್ರಾಂತಿಕಾರಕ ಕ್ರಮಗಳಿಂದಾಗಿ ದೇಶದ ಜನರ ಬದುಕಿನಲ್ಲಿ ಅಸಾಮಾನ್ಯ ಪ್ರಗತಿ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುವಾಹತಿ: ಎನ್ ಡಿಎ ಸರ್ಕಾರ ಕೈಗೊಂಡ ಕ್ರಾಂತಿಕಾರಕ ಕ್ರಮಗಳಿಂದಾಗಿ ದೇಶದ ಜನರ ಬದುಕಿನಲ್ಲಿ ಅಸಾಮಾನ್ಯ ಪ್ರಗತಿ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಸ್ಸಾಂ ಧೋಲಾದಲ್ಲಿ ದೇಶದ ಅತೀ ಉದ್ದದ ಸೇತುವೆ ಉದ್ಘಾಟನೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟರು. "ನಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಾಂತಿಕಾರಕ ಕ್ರಮಗಳಿಂದ ದೇಶದ ಜನರ ಬದುಕು ಅಸಾಮಾನ್ಯ ಪ್ರಗತಿಯನ್ನು ಕಂಡಿದೆ. 2014 ಮತ್ತು 2017ರ ಸರ್ಕಾರದ ಸಾಧನೆ ಬೆಂಬಿಸುವ ಅಂಕಿ ಅಂಶಗಳನ್ನು ಮೋದಿ ಜನರ ಮುಂದಿಟ್ಟರು. ಅಂತೆಯೇ ನರೇಂದ್ರ ಮೋದಿ ಆ್ಯಪ್‌ನಲ್ಲಿ ಆಯೋಜಿಸಲಾಗಿರುವ ಕೇಂದ್ರ ಸರ್ಕಾರದ ಸಾಧನಾ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮೋದಿ ಜನರಿಗೆ ಕರೆ ನೀಡಿದರು.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉಲ್ಲೇಖೀಸಿದ ಪ್ರಧಾನಿ ಮೋದಿ, ವಿದ್ಯುನ್ಮಾನ ಉತ್ಪಾದನೆ ಹೂಡಿಕೆಯಲ್ಲಿ ಭಾರೀ ಸಾಧನೆಯನ್ನು ಮಾಡಲಾಗಿದೆ. ಅಂತೆಯೇ ಕೃಷಿ, ಮೊಬೈಲ್ ಬ್ಯಾಂಕಿಂಗ್, ದೂರ ಸಂಪರ್ಕ ಸಾಂದ್ರತೆ, ಮಹಿಳಾ ಸಶಕ್ತೀಕರಣ, ಮೇಕ್ ಇನ್ ಇಂಡಿಯಾ, ಪ್ರವಾಸೋದ್ಯಮ, ವಿದ್ಯುದೀಕರಣ, ಸೌರಶಕ್ತಿ ಮತ್ತು ಎಲ್‌ಇಡಿ ಬಲ್ಬ್ ವಿತರಣೆಯಲ್ಲಿ ಅದ್ಭುತ ಪ್ರಗತಿ, ಬೆಳವಣಿಗೆಯನ್ನು ಸಾಧಿಸಲಾಗಿದೆ ಎಂದು ಮೋದಿ ಹೇಳಿದರು.
ಐದು ದಶಕಗಳ ಕನಸು ನನಸಾಗಿದೆ
ಈ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿ ಜನರ ಐದು ದಶಕಗಳ ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ. 2003ರಲ್ಲಿ ನಮ್ಮ ಶಾಸಕ ಜಗದೀಶ್ ಭುಯಾನ್ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದು ಸೇತುವೆ ಅನಿವಾರ್ಯತೆ ಕುರಿತು ಅಳಲು ತೋಡಿಕೊಂಡಿದ್ದರು. ಅಂದು ವಾಜಪೇಯಿ ಅವರು ಕೂಡ ಇದಕ್ಕೆ ಅನುಮೋದನೆ ನೀಡಿದ್ದರು. 2004ರಲ್ಲಿ ಮತ್ತೆ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಹತ್ತು ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣವಾಗಿರುತ್ತಿತ್ತು. ಆದರೆ ಬಳಿಕ ಬಂದ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಸೇತುವೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತು. ಇದೀಗು ನಿಮ್ಮ ಐದು ದಶಕಗಳ ಕನಸು ನನಸಾಗಿದೆ. ಬಿಜೆಪಿ ಆಡಳಿತದಲ್ಲಿ ಅಸ್ಸಾಂ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದಕ್ಕೂ ಮೊದಲು ಅಂದರೆ ಸೇತುವೆ ಲೋಕಾರ್ಪಣೆ ಮಾಡಿದ ನಂತರ ಮೋದಿ ಅವರು ಕಾರ್ ನಲ್ಲಿ ಸೇತುವೆಯ ಮೇಲೆ ಸಂಚರಿಸಿ ಸಂಭ್ರಮಿಸಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


