ದೇಶ

ಪಕ್ಷಕ್ಕೆ ಬಂದರೆ ರಜನಿ ಕಾಂತ್ ಗೆ ಸೂಕ್ತ ಸ್ಥಾನಮಾನ: ನಿತಿನ್ ಗಡ್ಕರಿ

ನಟ ರಜನಿಕಾಂತ್ ಅವರು ಪಕ್ಷಕ್ಕೆ ಬಂದರೇ ಅವರಿಗೆ ರಾಜಕೀಯವಾಗಿ ಸ್ವಾಗತಿಸುತ್ತೇನೆ ಎಂದು ಅಮಿತ್ ಶಾ ಹೇಳಿದ ಬೆನ್ನಲ್ಲೇ, ಕೇಂದ್ರ ಸಾರಿಗೆ ಸಚಿವ ನಿತಿನ್ ..

ಪಕ್ಷಕ್ಕೆ ಬಂದರೆ ರಜನಿ ಕಾಂತ್ ಗೆ ಸೂಕ್ತ ಸ್ಥಾನಮಾನ: ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Published On :
ನವದೆಹಲಿ: ನಟ ರಜನಿಕಾಂತ್ ಅವರು ಪಕ್ಷಕ್ಕೆ ಬಂದರೇ ಅವರಿಗೆ ರಾಜಕೀಯವಾಗಿ ಸ್ವಾಗತಿಸುತ್ತೇನೆ ಎಂದು ಅಮಿತ್ ಶಾ ಹೇಳಿದ ಬೆನ್ನಲ್ಲೇ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ರಜನಿಕಾಂತ್ ಅವರನ್ನು ಸ್ವಾಗತಿಸಿದ್ದಾರೆ.
ಟಿವಿ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿದ ಗಡ್ಕರಿ, ಒಂದು ವೇಳೆ ರಜನಿಕಾಂತ್ ಬಿಜೆಪಿ ಗೆ ಬಂದರೇ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ. 
ರಜನಿಕಾಂತ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಇರುತ್ತದೆ ಎಂದಿರುವ ಗಡ್ಕರಿ, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್ ಅವರು 2014ರಲ್ಲೇ ರಜನಿಕಾಂತ್ ಅವರನ್ನು ಪಕ್ಷಕ್ಕೆ ಕರೆತರಲು ಯತ್ನಿಸಿದ್ದರು. ರಜನಿ ಒಪ್ಪಿರಲಿಲ್ಲ.
ಆದರೆ ರಜನಿಕಾಂತ್‌ ಅವರು ತಮಿಳುನಾಡಿನ ರಾಜಕಾರಣಕ್ಕೆ ಸೂಕ್ತವಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.