ಐಸಿಎಸ್ ಇ, ಐಎಸ್ ಸಿ ಅಭ್ಯರ್ಥಿಗಳಿಗೆ ಇನ್ನು ಮುಂದೆ ಡಿಜಿಟಲ್ ಅಂಕಪಟ್ಟಿ
ಐಸಿಎಸ್ ಇ ಮತ್ತು ಐಎಸ್ ಸಿ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ...

Published On :
ಕೋಲ್ಕತ್ತಾ: ಐಸಿಎಸ್ ಇ ಮತ್ತು ಐಎಸ್ ಸಿ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ಗಳನ್ನು ಎಲ್ಲಿ, ಯಾವಾಗ ಬೇಕಾದರೂ ಡಿಜಿಟಲ್ ಪ್ರತಿಯನ್ನು ಪಡೆದುಕೊಳ್ಳಬಹುದು.
ಅಂಕಪಟ್ಟಿಯ ಕಾಯಂಪ್ರತಿಯ ಸ್ಕ್ಯಾನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹಳೆಯ ಪದ್ಧತಿಯಾಗಿದ್ದು ಇನ್ನು ಮುಂದೆ ಆ ಸಮಸ್ಯೆಗಳಿರುವುದಿಲ್ಲ. ಇನ್ನು ಮುಂದೆ ಅಭ್ಯರ್ಥಿಗಳು http://digilocker.gov.in ನಲ್ಲಿ ಖಾತೆಗಳನ್ನು ತೆರೆದು ಅಲ್ಲಿ ಮೊಬೈಲ್ ಸಂಖ್ಯೆ ನೀಡಿ ಅಲ್ಲಿ ಸೂಚಿಸಿದಂತೆ ಕ್ರಮಗಳನ್ನು ಅನುಸರಿಸಬೇಕು ಎಂದು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರತೂನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ವರ್ಷದಿಂದ ವಿದ್ಯಾರ್ಥಿಗಳು ಡಿಜಿಟಲ್ ಮೂಲಕ ಸಹಿ ಮಾಡಿದ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ಗಳನ್ನು ಪಡೆಯಬಹುದು. ಐಎಸ್ ಸಿ ಅಭ್ಯರ್ಥಿಗಳಿಗೆ ಡಿಜಿಟಲೀಕರಣ ಮೂಲಕ ಸಹಿ ಮಾಡಿದ ವರ್ಗಾವಣೆ ಪತ್ರ ಕೂಡ ಸಿಗುತ್ತದೆ. ಪ್ರತಿ ಅಭ್ಯರ್ಥಿಗಳ ದಾಖಲೆಗಳನ್ನು ಡಿಜಿಟಲ್ ಲಾಕರ್ ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಡಿಜಿಟಲ್ ಲಾಕರ್ ಒಂದು ಸೇವೆಯಾಗಿದ್ದು ಇಲ್ಲಿ ಅಭ್ಯರ್ಥಿಗಳ ಸಂಪೂರ್ಣ ದಾಖಲೆಗಳಿರುತ್ತವೆ. ಸಿಐಎಸ್ ಸಿಇ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜೊತೆ ಡಿಜಿಲಾಕರ್ ಸೌಕರ್ಯವನ್ನು ಐಸಿಎಸ್ ಇಯ 10ನೇ ತರಗತಿ ಮತ್ತು ಐಎಸ್ ಸಿಯ 12ನೇ ತರಗತಿಗೆ ವಿಸ್ತರಿಸಿದೆ. ಈ ವರ್ಷದಿಂದಲೇ ಸೌಲಭ್ಯ ಜಾರಿಗೆ ಬರಲಿದೆ.
ಅಭ್ಯರ್ಥಿಗಳ ಆಧಾರ್ ಸಂಖ್ಯೆ ದಾಖಲೆಗಳನ್ನು ಅಪ್ ಲೋಡ್ ಮಾಡಲು ಅಗತ್ಯವಾಗಿದೆ. ದಾಖಲಾತಿ ಸರ್ಟಿಫಿಕೇಟ್, ಪ್ರವೇಶ ಪತ್ರ, ಅಂಕಪಟ್ಟಿ ಮತ್ತು ತೇರ್ಗಡೆ ಪ್ರಮಾಣ ಪತ್ರಗಳು ಬೇಕಾಗುತ್ತವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿದ್ದು ಇಂದಿನ ಜನಾಂಗದ ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಹೆಚ್ಚು ಪಳಗಿರುವುದರಿಂದ ಇದು ಅವರಿಗೆ ಇಷ್ಟವಾಗಬಹುದು ಎಂದು ಅರತೂನ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


