ವಡೆ ಚೆನ್ನಾಗಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಇರಿದು ಕೊಂದ ವ್ಯಕ್ತಿ!
ಳಗಿನ ಉಪಹಾರ ಸೇವಿಸಲು ಬಂದ ವ್ಯಕ್ತಿಯೊಬ್ಬ ವಡೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕನನ್ನು ಇರಿದು ಕೊಂದಿರುವ ಘಟನೆ ...

Published On :
ಕೊಚ್ಚಿ: ಬೆಳಗಿನ ಉಪಹಾರ ಸೇವಿಸಲು ಬಂದ ವ್ಯಕ್ತಿಯೊಬ್ಬ ವಡೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕನನ್ನು ಇರಿದು ಕೊಂದಿರುವ ಘಟನೆ ವ್ಯಟ್ಟಿಲಾದಲ್ಲಿ ನಡೆದಿದೆ.
ಜಾನ್ಸನ್ ಮಂಗೋಲಪಲ್ಲಿ ಮೃತ ದುರ್ದೈವಿ. ವ್ಯಟ್ಟಿಲಾ ರಸ್ತೆಯಲ್ಲಿ ಜಾನ್ಸನ್ ಶಿಬಿನ್ ಹೊಟೇಲ್ ನಡೆಸುತ್ತಿದ್ದ. ನಿನ್ನೆ ಬೆಳಗ್ಗೆ ಉಪಹಾರಕ್ಕಾಗಿ ಹೋಟೆಲ್ ಗೆ ಬಂದ ಇಡುಕ್ಕಿ ಮೂಲದ ರಾಥೀಶ್ ಎಂಬಾತ, ತನಗೆ ಕೊಟ್ಟಿರುವ ವಡೆ ಚೆನ್ನಾಗಿಲ್ಲವೆಂದು ಜಗಳ ಮಾಡಿದ್ದಾನೆ. ನಂತರ ಅಲ್ಲಿಂದ ಹೋಗಿದ್ದಾನೆ.
ಮಧ್ಯಾಹ್ನ 2.30 ರ ವೇಳೆಗೆ ಪಕ್ಕದ ಬಾರ್ ನಲ್ಲಿ ಕಂಠಪೂರ್ತಿ ಕುಡಿದು ಬರುತ್ತಿದ್ದಾಗ ಜಾನ್ಸನ್ ಹೋಟೆಲ್ ನಿಂದ ತೆರಳುತ್ತಿದ್ದುದ್ದನ್ನು ನೋಡಿದ್ದಾನೆ. ಈ ವೇಳೆ ಮತ್ತೆ ಜಾನ್ಸನ್ ಬಳಿ ವಡೆ ಚೆನ್ನಾಗಿಲ್ಲನವೆಂದು ಜಗಳ ತೆಗೆದಿದ್ದಾನೆ. ನಂತರ ತನ್ನ ಬಳಿಯಿದ್ದ ಚಾಕುವಿನಿಂದ ಆತನ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೂಡಲೇ ಜಾನ್ಸನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಯಿತು, ಆದರೆ ಚಿಕಿತ್ಸೆ ಫಲಿಸದೇ ಸಂಜೆ 4.20 ರ ವೇಳೆಗೆ ಆತನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


