ಪತ್ನಿ ಹತ್ಯೆ ಮಾಡಿದ ಆರೋಪದ ಮೇರೆಗೆ ಪತಿ ಜೈಲಿಗೆ, ಪ್ರಿಯಕರನೊಂದಿಗೆ ಪತ್ನಿ ಸಂಸಾರ!
ತನ್ನ ಪತ್ನಿಯನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಪತಿಯೋರ್ವ ಕಳೆದೆರಡು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಆತನ ಪತ್ನಿ ಮಾತ್ರ ತನ್ನ ಪ್ರಿಯತಮನೊಂದಿಗೆ ಸಂಸಾರ ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ.

ಪಾಟ್ನಾ: ತನ್ನ ಪತ್ನಿಯನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಪತಿಯೋರ್ವ ಕಳೆದೆರಡು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಆತನ ಪತ್ನಿ ಮಾತ್ರ ತನ್ನ ಪ್ರಿಯತಮನೊಂದಿಗೆ ಸಂಸಾರ ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ.
ಮೂಲಗಳ ಪ್ರಕಾರ ಬಿಹಾರದಲ್ಲಿ ಇಂತಹುದೊಂದು ವಿಚಿತ್ರ ಘಟನೆ ನಡೆದಿದ್ದು, ಮುಜಾಫರ್ ಪುರದ ಜಗನ್ನಾಥ್ ಡೋಕ್ರಾ ಗ್ರಾಮದ ನಿವಾಸಿ ಮನೋಜ್ ಕುಮಾರ್ ಎಂಬಾತ ರಿಂಕಿ ಕುಮಾರ್ ಎಂಬಾಕೆಯನ್ನು ವಿವಾಹವಾದಿದ್ದ. ಆದರೆ ಕಳೆದ ಏಪ್ರಿಲ್ 8 2015ರಿಂದ ರಿಂಕಿ ಕುಮಾರ್ ನಾಪತ್ತೆಯಾಗಿದ್ದಳು. ಇತ್ತ ರಿಂಕಿ ಪೋಷಕರು ಮಾತ್ರ ಅಳಿಯ ಮನೋಜ್ ಕುಮಾರ್ ತಮ್ಮ ಮಗಳನ್ನು ವರದಕ್ಷಿಣೆಗಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ರಿಂಕಿ ನಾಪತ್ತೆಯಾದ 2 ದಿನಗಳ ಬಳಿಕ ಪಕ್ಕದ ಗ್ರಾಮದಲ್ಲಿ ಮಹಿಳೆಯ ಶವಪತ್ತೆಯಾಗಿತ್ತು.
ಇದನ್ನು ಮಹಜರು ಮಾಡಿದ ಪೊಲೀಸರು ಬಳಿಕಿ ರಿಂಕಿ ಪೋಷಕರನ್ನು ಸ್ಥಳಕ್ಕೆ ಕರೆಯಿಸಿದ್ದರು. ಆಗ ರಿಂಕಿ ಪೋಷಕರು ಇದು ತಮ್ಮ ಮಗಳ ಶವವೆಂದು ಹೇಳಿದ್ದರು. ಬಳಿಕ ಮನೋಜ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಮನೋಜ್ ಕುಮಾರ್ ಕಳೆದ 2 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ಮನೋಜ್ ಕುಮಾರ್ ಅವರ ತಾಯಿ ಲಲಿತಾ ದೇವಿ ಅವರು ಮಾತ್ರ ತಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ. ತನ್ನ ಸೊಸೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅಂದಿನಿಂದ ಸತತವಾಗಿ ಆಕೆಯ ಹುಡುಕಾಟದಲ್ಲಿ ತೊಡಗಿದ್ದರು.
ಅವರ ನಂಬಿಕೆಯ ಯಶಸ್ಸು ಎಂಬಂತೆ ಇತ್ತೀಚೆಗೆ ಸೊಸೆ ರಿಂಕಿ ಕುಮಾರ್ ತನ್ನ ಪ್ರಿಯತಮ ಮಯೂರ್ ಮಲ್ಲಿಕ್ ನೊಂದಿಗೆ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಇದ್ದ ದೃಶ್ಯವನ್ನು ಕಂಡು ಆಘಾತಗೊಂಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಸೊಸೆ ರಿಂಕಿ ಕುಮಾರ್ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.ಅಂತೆಯೇ ಸ್ಥಳೀಯ ಕೋರ್ಟ್ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಕೂಡಲೇ ಜಾರಿಗೆ ಬರುವಂತೆ ಪತಿ ಮನೋಜ್ ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.
ಇನ್ನು ಪೊಲೀಸ್ ವಶದಲ್ಲಿರುವ ಪತ್ನಿ ರಿಂಕಿ ಕುಮಾರ್ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ತನ್ನ ಮದುವೆಗೂ ಮೊದಲೇ ಮಯೂರ್ ಮಲ್ಲಿಕ್ ನನ್ನು ಪ್ರೀತಿಸುತ್ತಿದ್ದೆ, ಮದುವೆ ಬಳಿಕ ನಾವು ಓಡಿ ಹೋಗಿದ್ದೆವು ಎಂದು ಹೇಳಿಕೆ ನೀಡಿದ್ದಾಳೆ. ಒಟ್ಟಾರೆ ಪತ್ನಿ ಸಮಯ ಸಾಧಕತನ ಆಕೆಯ ಗಂಡನನ್ನು 2 ವರ್ಷಗಳ ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


