ಚುನಾವಣೆಗೆ ಬಳಸಿದ್ದ ಮತಯಂತ್ರಗಳಿಂದಲೇ 'ದುರ್ಬಳಕೆ ಆರೋಪ' ಸಾಬೀತುಪಡಿಸಿ: ಪಕ್ಷಗಳಿಗೆ ಚು.ಆಯೋಗದ ಸಾವಾಲು
ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರ ದುರ್ಬಳಕೆ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ಚುನಾವಣಾ ಆಯೋಗ ಸಭೆ ನಡೆಸಿದೆ.

Published On :
ನವದೆಹಲಿ: ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರ ದುರ್ಬಳಕೆ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ಚುನಾವಣಾ ಆಯೋಗ ಸಭೆ ನಡೆಸಿದೆ. ಚುನಾವಣೆಗೆ ಬಳಸಲಾಗಿದ್ದ ಮತಯಂತ್ರಗಳನ್ನೇ ಬಳಸಿಕೊಂಡು ಮತಯಂತ್ರ ದುರ್ಬಳಕೆ ಮಾಡಿರುವ ಆರೋಪವನ್ನು ಸಾಬೀತುಪಡಿಸುವಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದೆ.
ರಾಜಕೀಯ ಪಕ್ಷಗಳೊಂದಿಗಿನ ಸಭೆಯಲ್ಲಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ, ನಮಗೆ ಯಾರೂ ಅಚ್ಚುಮೆಚ್ಚಿನವರಿಲ್ಲ. ಎಲ್ಲಾ ಪಕ್ಷಗಳಿಂದಲೂ ನಾವು ಸಮಾನ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಇವಿಎಂ ಗಳ ದುರ್ಬಳಕೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಬಳಕೆ ಮಾಡಲಾಗಿದ್ದ ಮತಯಂತ್ರಗಳನ್ನೇ ಬಳಕೆ ಮಾಡಿಕೊಂಡು ರಾಜಕೀಯ ಪಕ್ಷಗಳು ಆರೋಪ ಸಾಬೀತುಪಡಿಸಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.
ವಿವಿಪಿಎಟಿ ವ್ಯವಸ್ಥೆಯುಳ್ಳ ಇವಿಎಂಗಳು ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಉಳಿಸಿಕೊಂಡು ವಿವಾದಗಳಿಗೆ ಅಂತ್ಯ ಹಾಡುತ್ತವೆ ಆದರೂ ಸಹ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಆರೋಪ ಸಾಬೀತುಪಡಿಸುವ ಸವಾಲು ಹಾಕುತ್ತಿದೆ ಎಂದು ಜೈದಿ ಹೇಳಿದ್ದಾರೆ. ಆರೋಪ ಸಾಬೀತುಪಡಿಸಲು ಅವಕಾಶ ನೀಡುವುದಾಗಿ ಜೈದಿ ಹೇಳಿದ್ದರೂ ಅದಕ್ಕೆ ನಿರ್ದಿಷ್ಠ ದಿನಾಂಕವನ್ನು ಸಭೆಯಲ್ಲಿ ಘೋಷಿಸಿಲ್ಲ.
ಚುನಾವಣಾ ಆಯೋಗ ಎಲ್ಲಾ ಪಕ್ಷಗಳಿಂದಲೂ ಸಮಾನ ಅಂತರ ಕಾಯ್ದುಕೊಂಡಿದೆ ಯಾವುದೇ ಪಕ್ಷವೂ ಅಚ್ಚುಮೆಚ್ಚಿನ ಪಕ್ಷವಲ್ಲ ಎಂದು ಜೈದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


