ದೇಶ

ಉಚ್ಛಾಟಿತ ಆಪ್ ಮುಖಂಡ ಕಪಿಲ್ ಮಿಶ್ರಾ ಮೇಲೆ ಹಲ್ಲೆ!

ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಚಾಚಾರದ ಆರೋಪ ಮಾಡಿ ಸತ್ಯಾಗ್ರಹ ನಡೆಸತ್ತಿರುವ ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಮುಖಂಡ ಕಪಿಲ್ ಮಿಶ್ರಾ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಉಚ್ಛಾಟಿತ ಆಪ್ ಮುಖಂಡ ಕಪಿಲ್ ಮಿಶ್ರಾ ಮೇಲೆ ಹಲ್ಲೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಚಾಚಾರದ ಆರೋಪ ಮಾಡಿ ಸತ್ಯಾಗ್ರಹ ನಡೆಸತ್ತಿರುವ ಆಮ್ ಆದ್ಮಿ ಪಕ್ಷದ ಉಚ್ಛಾಟಿತ ಮುಖಂಡ ಕಪಿಲ್ ಮಿಶ್ರಾ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ದೆಹಲಿಯ ತಮ್ಮ ನಿವಾಸದಲ್ಲಿ ಕಪಿಲ್ ಮಿಶ್ರಾ ಪ್ರತಿಭಟನೆ ನಡೆಸುತ್ತಿದ್ದು, ಆಮ್ ಆದ್ಮಿ ಪಕ್ಷದ ಐದು ಪ್ರಮುಖ ಮುಖಂಡರ ವಿದೇಶ ಪ್ರವಾಸ ಕುರಿತು ಮಾಹಿತಿ ನೀಡುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿನ್ನೆ ಸಂಜೆ  ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದ ವ್ಯಕ್ತಿಯೋರ್ವ ಏಕಾಏಕಿ ಕಪಿಲ್ ಮಿಶ್ರಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿದಾತನನ್ನು ಅಂಕಿತ್ ಭಾರದ್ವಾಜ್ ಎಂದು ಗುರುತಿಸಲಾಗಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರ  ನೆರವಿನಿಂದ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಅತನನ್ನು ಬಿಡುಗಡೆ ಮಾಡಲಾಗಿದೆ.

ಇನ್ನು ತಮ್ಮ ಮೇಲಿನ ದಾಳಿಯನ್ನು ಖಂಡಿಸಿರುವ ಕಪಿಲ್ ಮಿಶ್ರಾ, ಇದು ಆಪ್ ಪಕ್ಷ ನಡೆಸಿರುವ ದಾಳಿಯಾಗಿದ್ದು, ಆತ ಆಪ್ ಪಕ್ಷದ ಕಾರ್ಯಕರ್ತ ಎಂದು ದೂರಿದ್ದಾರೆ. ಇನ್ನು ಕಪಿಲ್ ಮಿಶ್ರಾ ಆರೋಪವನ್ನು ತಳ್ಳಿಹಾಕಿರುವ ಆಪ್, ಆತ  ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನಾಗಿದ್ದು, ತಮ್ಮ ಪಕ್ಷ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷದ ವಿರುದ್ಧ ಸಮರ ಸಾರಿರುವ ದೆಹಲಿಯ ಪದಚ್ಯುತ ಸಚಿವ ಕಪಿಲ್‌ ಮಿಶ್ರಾ ಅವರು ಬುಧವಾರದಿಂದ ಅನಿರ್ದಿಷ್ಟಉಪವಾಸ ಆರಂಭಿಸಿದ್ದಾರೆ. ಪಕ್ಷವು ಸ್ವೀಕರಿಸಿದ ವಿದೇಶೀ ದೇಣಿಗೆಯ ಮೂಲಗಳ ಮಾಹಿತಿ  ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಅವರು ನಿರಶನ ಆರಂಭಿಸಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್‌, ಆಶೀಷ್‌ ಖೇತಾನ್‌, ರಾಘವ ಚಡ್ಢಾ, ಸಂಜಯ್ ಸಿಂಗ್‌ ಮತ್ತು ದುರ್ಗೇಶ ಪಾಠಕ್‌ ಅವರನ್ನು ವಿದೇಶಿ ನಿಧಿ  ಸಂಗ್ರಹಕ್ಕಾಗಿ ಕೇಜ್ರಿವಾಲ್‌ ವಿದೇಶಕ್ಕೆ ಕಳಿಸಿದ್ದರು. ಆಗ ಸಂಗ್ರಹವಾದ ವಿದೇಶಿ ನಿಧಿಯ ವಿವರವನ್ನು ಈವರೆಗೆ ಏಕೆ ಪಕ್ಷ ಬಹಿರಂಗಪಡಿಸಿಲ್ಲ ಎಂದು ಮಿಶ್ರಾ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.