ನನ್ನ ಕಣ್ಣೀರನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ: ಮಹಿಳಾ ಐಪಿಎಸ್ ಆಧಿಕಾರಿ
ಬಿಜೆಪಿ ಶಾಸಕನ ಬೈಗುಳದಿಂದಾಗಿ ಕಣ್ಣೀರಿಟ್ಟಿದ್ದ ಉತ್ತರ ಪ್ರದೇಶ ಗೋರಖ್ ಪುರದ ಮಹಿಳಾ ಪೊಲೀಸ್ ಅಧಿಕಾರಿ ಚಾರು ನಿಗಮ್ ಅವರು, ತಮ್ಮ ಕಣ್ಣೀರನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ ಎಂದು ಹೇಳಿದ್ದಾರೆ.

ಲಖನೌ: ಬಿಜೆಪಿ ಶಾಸಕನ ಬೈಗುಳದಿಂದಾಗಿ ಕಣ್ಣೀರಿಟ್ಟಿದ್ದ ಉತ್ತರ ಪ್ರದೇಶ ಗೋರಖ್ ಪುರದ ಮಹಿಳಾ ಪೊಲೀಸ್ ಅಧಿಕಾರಿ ಚಾರು ನಿಗಮ್ ಅವರು, ತಮ್ಮ ಕಣ್ಣೀರನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಬಿಜೆಪಿ ಪಕ್ಷದ ಶಾಸಕ ರಾಧಾ ಮೋಹನ್ ಅಗರ್ವಾಲ್ ರಿಂದ ನಿಂದನೆಗೆ ಒಳಗಾಗಿ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಅಧಿಕಾರಿ ಕಣ್ಣೀರಿಟ್ಟ ಸುದ್ದಿ ಕೇವಲ ರಾಷ್ಟೀಯ ಮಾಧ್ಯಮಗಳಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಟೀಕೆಗೆ ಕಾರಣವಾಗಿದ್ದ ಈ ಘಟನೆ ಸಂಬಂಧ ಶಾಸಕ ರಾಧಾ ಮೋಹನ್ ಅಗರ್ವಾಲ್ ಅವರು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು.
ಇದೀಗ ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಿಳಾ ಪೊಲೀಸ್ ಅಧಿಕಾರಿ ಚಾರು ನಿಗಮ್ ಅವರು, ನನ್ನ ಕಣ್ಣೀರನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುನ ಐಪಿಎಸ್ ಅಧಿಕಾರಿ ಚಾರುನಿಗಮ್ ಅವರು, ಕಣ್ಣೀರು ದೌರ್ಬಲ್ಯದ ಪ್ರತೀಕವಾಗಿರಲಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಮತ್ತೊಂದು ಪೋಸ್ಟ್ ನಲ್ಲಿ ನಾನೊಬ್ಬ ಮಹಿಳಾ ಅಧಿಕಾರಿಯಾಗಿದ್ದು, ನಿಮ್ಮ ಸೊಕ್ಕಿಗೆ ಅದು ಕಾಣಲಿಲ್ಲ. ಆದರೆ ಸತ್ಯದ ನಿಜ ಬಣ್ಣ ಮತ್ತು ಅದರ ಪರಿಣಾಮ ಶೀಘ್ರದಲ್ಲೇ ನಿಮಗೆ ಗೋಚರವಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಇದೇ ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಚಾರು ನಿಗಮ್ ಅವರು, ಶಾಸಕರು ಬೈದಿದ್ದಕ್ಕೇ ತಾವು ಕಣ್ಣೀರು ಹಾಕಿಲ್ಲ. ಬದಲಿಗೆ ನನ್ನ ಬೆಂಬಲಕ್ಕೆ ನನ್ನ ಹಿರಿಯ ಅಧಿಕಾರಿಗಳು ನಿಂತರು ಎಂಬ ಕಾರಣದಿಂದಾಗಿ ಕಣ್ಣೀರು ಹರಿಯತಷ್ಟೇ. ಯಾರಿಗೇ ಆಗಲಿ ತಮ್ಮ ಬೆಂಬಲಕ್ಕೆ ಯಾರಾದರೂ ನಿಂತಾಗ ಭಾವುಕರಾಗುವುದು ಸಹಜ ಎಂದು ಚಾರು ನಿಗಮ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


